ADVERTISEMENT

ತುಮಕೂರು: ಜೆಡಿಎಸ್ ಸದಸ್ಯತ್ವ ನೋಂದಣಿ

ಪಂಚರತ್ನ ಯೋಜನೆಗಳ ಅರಿವು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 7:19 IST
Last Updated 8 ಅಕ್ಟೋಬರ್ 2021, 7:19 IST
ಶಿರಾ ತಾಲ್ಲೂಕಿನ ಹಾರೋಗೆರೆ ಗ್ರಾಮದಲ್ಲಿ ಗುರುವಾರ ಜೆಡಿಎಸ್ ಸದಸ್ಯತ್ವ ನೋಂಣಿ ಕಾರ್ಯಕ್ರಮಕ್ಕೆ ವಿಧಾನ ಪರಿಷತ್‌ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಚಾಲನೆ ನೀಡಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್, ಮುಖಂಡರಾದ ಸಿ‌.ಆರ್.ಉಮೇಶ್, ಮುಡಿಮಡು ರಂಗಶ್ವಾಮಯ್ಯ, ಎಸ್.ರಾಮಕೃಷ್ಣ, ಸತ್ಯಪ್ರಕಾಶ್ ಇದ್ದರು
ಶಿರಾ ತಾಲ್ಲೂಕಿನ ಹಾರೋಗೆರೆ ಗ್ರಾಮದಲ್ಲಿ ಗುರುವಾರ ಜೆಡಿಎಸ್ ಸದಸ್ಯತ್ವ ನೋಂಣಿ ಕಾರ್ಯಕ್ರಮಕ್ಕೆ ವಿಧಾನ ಪರಿಷತ್‌ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಚಾಲನೆ ನೀಡಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್, ಮುಖಂಡರಾದ ಸಿ‌.ಆರ್.ಉಮೇಶ್, ಮುಡಿಮಡು ರಂಗಶ್ವಾಮಯ್ಯ, ಎಸ್.ರಾಮಕೃಷ್ಣ, ಸತ್ಯಪ್ರಕಾಶ್ ಇದ್ದರು   

ಶಿರಾ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾತ್ರ ರೈತರು, ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರ ಹಿತಕಾಯಲು ಸಾಧ್ಯ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಹೇಳಿದರು.‌

ತಾಲ್ಲೂಕಿನ ಹಾರೋಗೆರೆ ಗ್ರಾಮದಲ್ಲಿ ಗುರುವಾರ ಜೆಡಿಎಸ್ ಸದಸ್ಯತ್ವ ನೋಂದಣಿ ಹಾಗೂ ಪಂಚರತ್ನ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರ ಹಿತಕಾಯುವ ಕೆಲಸ ಮಾಡಿದ್ದರು. ಈ ಸಮಯದಲ್ಲಿ ಕೈಗೊಂಡ ಜನಪರ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಪಕ್ಷವನ್ನು ಸಂಘಟಿಸಬೇಕು ಎಂದರು.

ADVERTISEMENT

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಸುಭದ್ರವಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ 123ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಮತ್ತೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ‌.ಅಂಜಿನಪ್ಪ, ಮುಖಂಡರಾದ ಸಿ‌.ಆರ್.ಉಮೇಶ್, ಮುಡಿಮಡು ರಂಗಶ್ವಾಮಯ್ಯ, ಎಸ್.ರಾಮಕೃಷ್ಣ, ಸತ್ಯಪ್ರಕಾಶ್, ಟಿ.ಡಿ.ಮಲ್ಲೇಶ್, ಉದಯಶಂಕರ್, ನಗರ ಘಟಕದ ಅಧ್ಯಕ್ಷ ಅಂಜಿನಪ್ಪ, ರಹಮತ್, ರೇಣುಕಮ್ಮ, ಜಯಶ್ರೀ, ಲಿಂಗದಹಳ್ಳಿ ಚೇತನ್ ಕುಮಾರ್, ರವಿಶಂಕರ್, ಯಲಪೇನಹಳ್ಳಿ ಕೃಷ್ಣೇಗೌಡ, ಸುನೀಲ್ ಕುಮಾರ್, ಯುವ ಜನತಾದಳ ಅಧ್ಯಕ್ಷ ವೀರೇಂದ್ರ, ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.