ADVERTISEMENT

ಶಿರಾ: ಸರ್ಕಾರಿ ಶಾಲೆಗೆ ದಾಖಲಾದ ನ್ಯಾಯಾಧೀಶೆ ಮಗ

​ಪ್ರಜಾವಾಣಿ ವಾರ್ತೆ
Published 31 ಮೇ 2025, 4:18 IST
Last Updated 31 ಮೇ 2025, 4:18 IST
ಶಿರಾದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ನ್ಯಾಯಾಧೀಶೆ ಝರೀಫ ಬಾನು ಅವರು ತನ್ನ ಪುತ್ರ ಆಜಾದ್ ಆರ್.ಝೆಡ್ ಅವರನ್ನು ದಾಖಲಿಸಿದರು
ಶಿರಾದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ನ್ಯಾಯಾಧೀಶೆ ಝರೀಫ ಬಾನು ಅವರು ತನ್ನ ಪುತ್ರ ಆಜಾದ್ ಆರ್.ಝೆಡ್ ಅವರನ್ನು ದಾಖಲಿಸಿದರು   

ಶಿರಾ: ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಹಿಂದೇಟು ಹಾಕುತ್ತಿರುವ ಸಮಯದಲ್ಲಿ ನ್ಯಾಯಾಧೀಶರು ತನ್ನ ಮಗನನ್ನು ದಾಖಲು ಮಾಡಿಸಿದ್ದಾರೆ.

ನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾವಣೆಯಾಗಿ ಬಂದಿರುವ ನ್ಯಾಯಾಧೀಶೆ ಝರೀಫ ಬಾನು ಅವರು ತನ್ನ ಪುತ್ರ ಆಜಾದ್ ಆರ್.ಝೆಡ್. ಅವರನ್ನು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಗೆ ಶುಕ್ರವಾರ ದಾಖಲು ಮಾಡಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿ ಶುಕ್ರವಾರ ಮಕ್ಕಳನ್ನು ಶಾಲೆಗೆ ಹೂವು ನೀಡುವ ಮೂಲಕ ಸ್ವಾಗತಿಸಿದರು.

ADVERTISEMENT

ನಗರದ ಸಂತೆಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸದ ಗೋವಿಂದ ಕಾರಜೋಳ ಅವರು ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.

ಶಿರಾದ ಸಂತೇಪೇಟೆಯ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಸಂಸದ ಗೋವಿಂದ ಕಾರಜೋಳ ಅವರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.