ತಿಪಟೂರಿನಲ್ಲಿ ಮಂಗಳವಾರ ನಡೆದ ವೈಶ್ಯ ಕೋ–ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್ ಅವರನ್ನು ಸನ್ಮಾನಿಸಲಾಯಿತು.
ತಿಪಟೂರು: ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಮೂಗು ತೋರಿಸುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್‌ಕುಮಾರ್ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ವೈಶ್ಯ ಕೋ–ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಸಹಕಾರಿ ಕ್ಷೇತ್ರಕ್ಕೆ ಕಾಲಿಡಬಾರದು, ಒತ್ತಡ ಹೇರಬಾರದು. ಅವಶ್ಯಕತೆ ಇರುವ ಸಣ್ಣಪುಟ್ಟ ಜನರಿಗೆ ಬ್ಯಾಂಕ್‌ಗಳು ಸಾಲ ನೀಡದ ಸಂದರ್ಭದಲ್ಲಿ ಸಹಕಾರಿ ಸಂಸ್ಥೆಗಳು ನೆರವಾಗುತ್ತವೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರದಂತೆ ರಾಜಕೀಯದಲ್ಲೂ ಆರ್ಯವೈಶ್ಯ ಸಮಾಜ ಮುಂದೆ ಬರಬೇಕು ಎಂದರು.
ಆರ್ಯವೈಶ್ಯ ಸಮಾಜದ ಜನರು ನೂರಾರು ವರ್ಷಗಳಿಂದ ವ್ಯಾಪಾರ ಮತ್ತು ವಹಿವಾಟು ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಸಮಾಜದ ಹಿರಿಯರು ಸಹಕಾರಿ ಸಂಘ ಪ್ರಾರಂಭಿಸಿದ್ದರು. ಸಮಾಜ ಅಭಿವೃದ್ಧಿ ಕಾಣಬೇಕಾದರೆ ಪ್ರತಿ ಗ್ರಾಮದಲ್ಲಿ ಉದ್ಯಮ ಪ್ರಾರಂಭಿಸಬೇಕು ಎಂದು ಸಲಹೆ ಮಾಡಿದರು.
ಮುಖಂಡ ರಾಮನಾಥ್, ‘182 ವರ್ಷಗಳ ಹಿಂದೆ ನಂಜನಗೂಡಿನ ನಂಜುಂಡ ಶ್ರೇಷ್ಟಿಯವರು 42ಕ್ಕೂ ಹೆಚ್ಚು ಆರ್ಯವೈಶ್ಯ ಸಹಕಾರಿ ಸಂಘಗಳನ್ನು ಪ್ರಾರಂಭಿಸಿದ್ದರು. ಆರ್ಥಿಕ ಸಬಲೀಕರಣಕ್ಕೆ ಮುಂದಾಗಿದ್ದರು. ಅಂದಿನ ಸಂಘಗಳು ಪ್ರಸ್ತುತ ಬ್ಯಾಂಕ್‌ಗಳಾಗಿ ಪರಿವರ್ತನೆಯಾಗಿವೆ’ ಎಂದರು.
ಮಾಜಿ ಸಚಿವ ಬಿ.ಸಿ.ನಾಗೇಶ್, ಉದ್ಯಮಿ ಅನಂತ, ಶಿವಮೊಗ್ಗದ ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಅಧ್ಯಕ್ಷ ಡಿ.ಎಂ.ಅರವಿಂದ್, ವೈಶ್ಯ ಕೋ–ಆಪರೇಟಿವ್ ಸೊಸೈಟಿ ಅಧ್ಯಕ್ಷ ಟಿ.ಎಸ್.ಸುಬ್ರಮಣ್ಯ, ಉಪಾಧ್ಯಕ್ಷ ಜಿ.ಕೆ.ಸಂಜಯ್, ನಿರ್ದೇಶಕರಾದ ಪ್ರಸಾದ್, ನಟರಾಜ್, ಮಂಜುನಾಥ್, ಕಿಶೋರ್ ಕುಮಾರ್, ರಾಮಚಂದ್ರ ಗುಪ್ತ, ಪ್ರವೀಣ್, ವಿಶ್ವನಾಥ್ ಬಾಬು, ಪಣರಾಜ್, ಶ್ರೀನಾಥ್, ಜ್ಯೋತಿಲಕ್ಷ್ಮಿ, ಶ್ವೇತಾ ಪ್ರದೀಪ್, ಹರಿಬಾಬು, ವ್ಯವಸ್ಥಾಪಕರಾದ ಸೌಮ್ಯಾ, ಗಾಯತ್ರಿ ಶ್ರೀನಿವಾಸ್, ದೇವಿಪ್ರಸಾದ್, ಸ್ಫೂರ್ತಿ ಅರವಿಂದ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.