ADVERTISEMENT

ಮಧುಗಿರಿ: ಸಹಕಾರಿ ಉಪ ನಿಬಂಧಕ ಸಣ್ಣಪ್ಪಯ್ಯ, FDA ರಾಘವೇಂದ್ರ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 14:55 IST
Last Updated 21 ಜುಲೈ 2025, 14:55 IST
<div class="paragraphs"><p>ರಾಘವೇಂದ್ರ</p></div>

ರಾಘವೇಂದ್ರ

   

ಮಧುಗಿರಿ: ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯಲ್ಲಿ ಸೋಮವಾರ ₹20 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದ ಸಹಕಾರ ಸಂಘಗಳ ಉಪ ನಿಬಂಧಕ ಸಣ್ಣಪ್ಪಯ್ಯ, ಪ್ರಥಮ ದರ್ಜೆ ಸಹಾಯಕ ರಾಘವೇಂದ್ರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಶಿರಾ ತಾಲ್ಲೂಕಿನ ಎಲೆಯೂರು ಗ್ರಾಮದ ಮೀನುಗಾರಿಕೆ ಸಹಕಾರ ಸಂಘದ ಖಾತೆ ಬ್ಲಾಕ್ ಮಾಡಿದ್ದು, ಈ ಖಾತೆ ಮತ್ತೆ ಪ್ರಾರಂಭಿಸಲು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೀನುಗಾರಿಕೆ ಸಂಘದ ಪದಾಧಿಕಾರಿ ರವೀಶ್‌ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ನಿಬಂಧಕರ ಕಚೇರಿಯಲ್ಲಿ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಹಣದ ಸಮೇತ ಇಬ್ಬರನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ಸಂತೋಷ್‌, ಇನ್‌ಸ್ಪೆಕ್ಟರ್‌ಗಳಾದ ರಾಜು, ಸಲೀಂ, ಸುರೇಶ್, ಶಿವರುದ್ರಪ್ಪ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.