
ಪ್ರಜಾವಾಣಿ ವಾರ್ತೆ
ಬ್ರಹ್ಮರಥೋತ್ಸವ
ಮಧುಗಿರಿ: ಪಟ್ಟಣದ ವೆಂಕಟರಮಣ ದೇವಸ್ಥಾನದಲ್ಲಿ ರಥೋತ್ಸವ ಅಂಗವಾಗಿ ಜನವರಿ 22ರಿಂದ ಫೆಬ್ರವರಿ 4ರವರೆಗೆ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
22ರಂದು ಸಂಜೆ ವಿಶ್ವಕ್ ಸೇನಾ ಆರಾಧನೆ, ಪುಣ್ಯಾಹ, ಅಂಕುರಾರ್ಪಣ, ರಕ್ಷಾಬಂಧನ, ಹಂಸವಾಹನ ಇರುತ್ತದೆ. 23ಕ್ಕೆ ಅಭಿಷೇಕ, ಕಳಶ ಸ್ಥಾಪನೆ, ಧ್ವಜಾರೋಹಣ, ಭೇರಿ ತಾಡನ, ಗಜೇಂದ್ರ ಮೋಕ್ಷ ಇರುತ್ತದೆ. 24ರಂದು ಅಭಿಷೇಕ, ಮುತ್ತಂಗಿ ಸೇವೆ, ಸಹಸ್ರನಾಮರ್ಚನೆ, ಗರುಡೋತ್ಸವ, ಕಾಶಿಯಾತ್ರೆ, ಲಕ್ಷ್ಮಿ ಕಲ್ಯಾಣ ನಂತರ ಪ್ರಸಾದ ವಿನಿಯೋಗ ಇರುತ್ತದೆ.
25ರಂದು ಅಭಿಷೇಕ, ಸೂರ್ಯಮಂಡಲ ಉತ್ಸವ, ಪೂಲಂಗಿಸೇವೆ, ತೋಮಾಲೆ ಸೇವೆ ನಂತರ ಬ್ರಹ್ಮರಥೋತ್ಸವ ಇರುತ್ತದೆ. 26ರಿಂದ ಫೆಬ್ರವರಿ 4ರವರೆಗೆ ಪೂಜಾ ಕಾರ್ಯ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.