ಕೊಡಿಗೇನಹಳ್ಳಿ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್-ಕಾರು ಸಂಚರಿಸುವಾಗ ಏಕಾಏಕಿ ನುಗ್ಗಿಬರುವ ನಾಯಿಗಳಿಂದ ಸವಾರರು ಹಾಗೂ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ.
ಹೋಬಳಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರು ಓಡಾಡುವುದು ಕಷ್ಟವಾಗಿದೆ. ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳು ಏಕಾಏಕಿ ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್, ಕಾರು ಹಾಗೂ ಜನರ ಹಿಂದೆ ಓಡಿ ಬಂದು ಆತಂಕ ಮೂಡಿಸುತ್ತಿವೆ.
ಪಟ್ಟಣದ ಮಾಂಸ ಮಾರಾಟ ಮಳಿಗೆ, ಜಯಮಂಗಲಿ ನದಿ ಸೇತುವೆ ಸಮೀಪವಿರುವ ತ್ಯಾಜ್ಯಕ್ಕೆ ನಾಯಿಗಳು ಬೀಡುಬಿಟ್ಟಿರುತ್ತವೆ. ಇದರಿಂದಾಗಿ ಈ ರಸ್ತೆ ಮೂಲಕ ಸಂಚರಿಸುವ ಸವಾರರು, ವಿದ್ಯಾರ್ಥಿಗಳು ಹಾಗೂ ಡೇರಿಗೆ ಬರುವ ಹಾಲು ಉತ್ಪಾದಕರ ಪಾಡು ಹೇಳತೀರದಂತಾಗಿದೆ ಎನ್ನುತ್ತಾರೆ ಬಾಬು.
ಅಧಿಕಾರಿಗಳು ಗಮನಹರಿಸಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.