ADVERTISEMENT

ಕೊಲ್ಲಾಪುರದಮ್ಮ ದೇವಾಲಯ ಉದ್ಘಾಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 8:29 IST
Last Updated 14 ನವೆಂಬರ್ 2021, 8:29 IST

ತಿಪಟೂರು: ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಸಣ್ಣೇನಹಳ್ಳಿ ಗ್ರಾಮದಲ್ಲಿ ಕೊಲ್ಲಾಪುರದಮ್ಮ ದೇವಿಯ ನೂತನ ದೇವಾಲಯದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಶಿಖರ ಕಳಸ ಮಹೋತ್ಸವವು ನ. 15ರಂದು ವಿಜೃಂಭಣೆಯಿಂದ ನೆರವೇರಲಿದೆ.

ನ. 14ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಗಂಗಾಪೂಜೆ ಮೂಲಕ ದೇವಾತಾ ಕಾರ್ಯಗಳು ಪ್ರಾರಂಭವಾಗಲಿವೆ. ಕೊಲ್ಲಾಪುರ ದೇವಿಯ ಸ್ಥಿರ ವಿಗ್ರಹ ಗ್ರಾಮ ಪ್ರವೇಶವಿದೆ. ಸುತ್ತಮುತ್ತಲ ಗ್ರಾಮಗಳ ಗ್ರಾಮ ದೇವತೆಗಳ ಸಮೇತ ರಾಜ ಬೀದಿಯಲ್ಲಿ ಜಾನಪದ ಸಾಂಸ್ಕೃತಿಕ ತಂಡಗಳ ಕಾರ್ಯಕ್ರಮದೊಂದಿಗೆ ಪುರ ಪ್ರವೇಶ ನಡೆಯಲಿದೆ.

ನ. 15ರಂದು ಬ್ರಾಹ್ಮಿ ಲಗ್ನದಲ್ಲಿ ದೇವಿಯ ಸ್ಥಿರ ವಿಗ್ರಹ ಪ್ರತಿಷ್ಠಾಪನೆ, ಬೆಳಿಗ್ಗೆ 6 ಗಂಟೆಗೆ ಕಳಸಾರೋಹಣ, ದೃಷ್ಟಿ ಪೂಜೆ, ರುದ್ರಾಭಿಷೇಕ, ಚಂಡಿಕಾಹೋಮ ನೆರವೇರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.