ADVERTISEMENT

ಕೊರಟಗೆರೆ: ಉದ್ಯೋಗ ಮೇಳ

ನೂರಾರು ಯುವಕರು ಭಾಗಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 10:04 IST
Last Updated 7 ಮಾರ್ಚ್ 2023, 10:04 IST
ಕೊರಟಗೆರೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಉದ್ಯೋಗಾಕಾಂಕ್ಷಿಗಳು
ಕೊರಟಗೆರೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಉದ್ಯೋಗಾಕಾಂಕ್ಷಿಗಳು   

ಕೊರಟಗೆರೆ: ಪಟ್ಟಣದಲ್ಲಿ ಭಾನುವಾರ ತಾಲ್ಲೂಕಿನ ಯುವಕರಿಗೆ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ನೂರಾರು ಯುವಕರು ಉದ್ಯೋಗಕ್ಕಾಗಿ ನೇರ ಸಂದರ್ಶನಕ್ಕೆ ಹಾಜರಾದರು.

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಬಿಜೆಪಿ ಮುಖಂಡ ಕೆ.ಎಂ. ಮುನಿಯಪ್ಪ ಉದ್ಯೋಗ ಮೇಳ ಆಯೋಜಿಸಿದ್ದರು. 60 ವಿವಿಧ ಕಂಪನಿಗಳು ಮೇಳದಲ್ಲಿ ಪಾಲ್ಗೊಂಡಿದ್ದವು. ಸುಮಾರು ಒಂದು ಸಾವಿರ ಯುವಕರು ನೇರ ಸಂದರ್ಶನದಲ್ಲಿ ಭಾಗವಹಿಸಿದ್ದರು. ಮೇಳದಲ್ಲಿ 700 ಮಂದಿ ವಿವಿಧ ಕಂಪನಿಗೆ ಆಯ್ಕೆಯಾದರು. ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ಆಯ್ಕೆ ಪತ್ರ ನೀಡಲಾಯಿತು.

‘ಗ್ರಾಮೀಣ ಭಾಗದಲ್ಲಿ ಬಹಳಷ್ಟು ವಿದ್ಯಾವಂತರು ಉದ್ಯೋಗ ಇಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಅಂತಹವರಿಗೆ ಅನುಕೂಲಕ್ಕಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದರಿಂದ ತಾಲ್ಲೂಕಿನ ಬಹುತೇಕ ಯುವಕರಿಗೆ ಅನುಕೂಲವಾಗಿದೆ’ ಎಂದು ಆಯೋಜಕ ಕೆ.ಎಂ. ಮುನಿಯಪ್ಪ ತಿಳಿಸಿದರು.

ADVERTISEMENT

ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಪವನ್ ಕುಮಾರ್, ಚೇತನ್ ಮುನಿಯಪ್ಪ, ಚಿತ್ರನಟಿ ಪ್ರೇಮಾ, ಆರತಿ, ಡಾ.ಶಾಂತವೀರ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಭಾರತೀ ಅಪ್ಪಣ್ಣ ಸ್ವಾಮೀಜಿ, ಮುರುಗೇಂದ್ರ ಸ್ವಾಮೀಜಿ, ನಾಗೇಂದ್ರ ಸ್ವಾಮೀಜಿ, ಡಾ.ವಿನೋದ್ ವತ್ಸವ್, ರಮೇಶ್ ನಾಯ್ಡು, ಲಹರಿ ವೇಲು, ಡಾ.ಚಿನ್ನಸ್ವಾಮಿ, ರಾಜೇಶ್ ಬಾಬು, ಹೇಮಂತ್, ಓಂಕಾರ್, ಮುಖಂಡರಾದ ಗುರುದತ್, ಗೋವಿಂದರೆಡ್ಡಿ, ಮಂಜುನಾಥ್, ಆನಂದ್, ವಿನೋದ್ ಶ್ರೀವಾಸ್ತವ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.