ADVERTISEMENT

ಪಾವಗಡ| ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಕೆಎಸ್‌ಪಿಡಿಸಿಎಲ್‌ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:46 IST
Last Updated 19 ಸೆಪ್ಟೆಂಬರ್ 2025, 6:46 IST
ಪಾವಗಡ ತಾಲ್ಲೂಕಿನ ತಿರುಮಣಿ ಸೋಲಾರ್ ಪಾರ್ಕ್ ಆಡಳಿತ ಕಚೇರಿ ಬಳಿ ಬುಧವಾರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೆಎಸ್‌ಪಿಡಿಸಿಎಲ್, ಕ್ರೆಡಲ್ ನೌಕರರು ಪ್ರತಿಭಟನೆ ನಡೆಸಿದರು
ಪಾವಗಡ ತಾಲ್ಲೂಕಿನ ತಿರುಮಣಿ ಸೋಲಾರ್ ಪಾರ್ಕ್ ಆಡಳಿತ ಕಚೇರಿ ಬಳಿ ಬುಧವಾರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೆಎಸ್‌ಪಿಡಿಸಿಎಲ್, ಕ್ರೆಡಲ್ ನೌಕರರು ಪ್ರತಿಭಟನೆ ನಡೆಸಿದರು   

ಪಾವಗಡ: ತಾಲ್ಲೂಕಿನ ತಿರುಮಣಿ ಸೋಲಾರ್‌ ಪಾರ್ಕ್‌ ಆಡಳಿತ ಕಚೇರಿ ಬಳಿ ಬುಧವಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಎಸ್‌ಪಿಡಿಸಿಎಲ್‌ ನೌಕರರು ಪ್ರತಿಭಟನೆ ನಡೆಸಿದರು.

ನೌಕರರಿಗೆ ಸಕಾಲಕ್ಕೆ ವೇತನ ನೀಡುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆಯೂ ಸಮಸ್ಯೆಯಾಗುತ್ತಿದೆ. ಜಮೀನು ನೀಡಿರುವ ಕುಟುಂಬಗಳಿಗೆ ಇದೇ ಕೆಲಸ ಜೀವನಕ್ಕೆ ಆಧಾರವಾಗಿದೆ. ವೇತನವೂ ಸಕಾಲಕ್ಕೆ ಸಿಗದೆ ಸಮಸ್ಯೆಯಾಗುತ್ತಿದೆ. ವೇತನ ಹೆಚ್ಚಳ, ಎಚ್‌ಆರ್‌ಎ, ಡಿಎ, ವೈದ್ಯಕೀಯ ಭತ್ಯೆ ಸೇರಿದಂತೆ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲ ಎಂದು ಪ್ರತಿಭಟನನಿರತರು ಆರೋಪಿಸಿದರು.

ಕೆಲಸದ ಸ್ಥಳದಲ್ಲಿ ಸೂಕ್ತ ಸುರಕ್ಷತಾ ಸವಲತ್ತುಗಳಿಲ್ಲ. ಹೆಚ್ಚಿನ ಪ್ರಮಾಣದ ವಿದ್ಯುತ್‌ ಪ್ರವಹಿಸುವ ಸ್ಥಳದಲ್ಲಿ ಜೀವವನ್ನೂ ಲೆಕ್ಕಿಸದೆ ಕೆಲಸ ಮಾಡಲಾಗುತ್ತದೆ. ಹಗಲು, ರಾತ್ರಿ ಕೆಲಸ ಮಾಡುವ ನೌಕರರಿಗೆ ಮೂಲ ಸವಲತ್ತುಗಳನ್ನೂ ಕಲ್ಪಿಸಿಲ್ಲ. ಇದರಿಂದ ತೀವ್ರ ಸಮಸ್ಯೆಯಾಗುತ್ತಿದೆ ಎಂದು ದೂರಿದರು.

ADVERTISEMENT

ಈ ಕೂಡಲೇ ವೇತನ ಹೆಚ್ಚಿಸಬೇಕು. ಸಕಾಲಕ್ಕೆ ವೇತನ ನೀಡಬೇಕು. ಎಚ್‌ಆರ್‌ಎ, ಡಿಎ, ಸೇರಿದಂತೆ ಎಲ್ಲ ವೇತನ ಸವಲತ್ತುಗಳನ್ನೂ ನೀಡಬೇಕು. ಪಿಂಚಣಿ ನೀಡಬೇಕು. ನೌಕರರಿಗೆ ಅಗತ್ಯ ಸುರಕ್ಷತೆ, ಭದ್ರತೆ ಕಲ್ಪಿಸಬೇಕು. ವರ್ಗಾವಣೆ ನೀತಿ, ಸಮಸ್ಯೆ ಪರಿಹಾರ ಕೇಂದ್ರ, ಸಮಾಲೋಚನಾ ಸ್ಥಿತಿ ಆರಂಭಿಸಿ ನೌಕರರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ಶಕ್ತಿ ಸ್ಥಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್‌.ಪಿ. ಸಾಂಬಸದಾಶಿವರೆಡ್ಡಿ, ಅಕ್ಕಲಪ್ಪ, ಕೆ.ಎಂ. ಶ್ರೀನಿವಾಸುಲು, ಗೋವಿಂದಪ್ಪ, ಕ್ರೆಡಲ್‌, ಕೆಎಸ್‌ಪಿಡಿಸಿಎಲ್‌ ನೌಕರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.