ADVERTISEMENT

18ರಿಂದ ಬೆನವಾರದಮ್ಮ ಜಾತ್ರೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:03 IST
Last Updated 16 ಏಪ್ರಿಲ್ 2025, 14:03 IST

ಕುಣಿಗಲ್: ತಾಲ್ಲೂಕಿನ ಅಮೃತೂರು ಹೋಬಳಿ ಬೆನವಾರ ಗ್ರಾಮದ ಪಟ್ಟಲದಮ್ಮ (ಬೆನವಾರದಮ್ಮ) ಮತ್ತು ಅರಿವಿನ ಮಾರಮ್ಮ ದೇವಿ ಜಾತ್ರೆ ಏಪ್ರಿಲ್‌ 18ರಿಂದ 20ರ ವರೆಗೆ ನಡೆಯಲಿದೆ.

18ರಂದು ಬೆಳಗ್ಗೆಯಿಂದ ಸಂಜೆವರೆಗೆ ವಿಶೇಷ ಅಲಂಕಾರ, ಸೇವೆ, ರಾತ್ರಿ ಅಗ್ನಿಕೊಂಡೋತ್ಸವ ಮತ್ತು ಬೆಳ್ಳಿ ಪಲ್ಲಕಿ ಉತ್ಸವ. 19ರಂದು ಮದ್ದಿನಮರ, ಬಾಣ ಬಿರುಸುಗಳ ಪ್ರದರ್ಶನ ನಂತರ ಗ್ರಾಮ ದೇವತೆಗಳ ಅಗ್ನಿಗರ್ತ ಪ್ರವೇಶ, 20ರಂದು ಅರಿವಿನ ಮಾರಮ್ಮ ದೇವಿಗೆ ಕದಲಿ ಕಟ್ಟುವಿಕೆ, ಗ್ರಾಮ ದೇವತೆಗಳ ಆರತಿ ಪ್ರದಕ್ಷಿಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT