ADVERTISEMENT

ಬೆಳೆ ಖರೀದಿಸಿ ಗ್ರಾಮೀಣರಿಗೆ ಉಚಿತ ವಿತರಣೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 16:17 IST
Last Updated 10 ಏಪ್ರಿಲ್ 2020, 16:17 IST
ಕುಣಿಗಲ್ ತಾಲ್ಲೂಕು ರೈತರಿಂದ ಖರೀದಿಸಿದ ಕೋಸನ್ನು ಶಾಸಕ ಡಾ.ರಂಗನಾಥ್ ಉಚಿತವಾಗಿ ವಿತರಿಸಿದರು
ಕುಣಿಗಲ್ ತಾಲ್ಲೂಕು ರೈತರಿಂದ ಖರೀದಿಸಿದ ಕೋಸನ್ನು ಶಾಸಕ ಡಾ.ರಂಗನಾಥ್ ಉಚಿತವಾಗಿ ವಿತರಿಸಿದರು   

ಕುಣಿಗಲ್: ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತರ ಜಮೀನನಲ್ಲಿ ಬೆಳೆದಿರುವ ಹಣ್ಣು, ತರಕಾರಿಗಳನ್ನು ಖರೀದಿಸಿ ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ವಿತರಿಸುವ ಕಾರ್ಯಕ್ಕೆ ಶಾಸಕ ಡಾ.ರಂಗನಾಥ ಚಾಲನೆ ನೀಡಿದರು.

ತಾಲ್ಲೂಕಿನ ನೂರಾರು ರೈತರು ಬೆಳೆದಿರುವ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಜಮೀನನಲ್ಲಿ ಕೊಳೆಯುತ್ತಿದೆ ಎಂದು ಶಾಸಕರ ಬಳಿ ಅಳಲು ತೋಡಿಕೊಂಡಿದ್ದರು. ಆದ್ದರಿಂದ ಡಾ.ರಂಗನಾಥ್‌ ಗುರುವಾರದಿಂದ ತಾಲ್ಲೂಕಿನ ರೈತರ ಜಮೀನುಗಳಿಗೆ ಭೇಟಿ ನೀಡಿ ಸಮಾಧಾನಕರ ಬೆಲೆ ನಿಗದಿ ಮಾಡಿ, ಜಮೀನಿನಿಂದ ಬೆಳೆ ತರುತ್ತಿದ್ದಾರೆ.

ರೈತರಿಂದ ಖರೀದಿಸಿದ ಕುಂಬಳಕಾಯಿ, ಎಲೆಕೋಸು, ಟೊಮೆಟೊ, ಕ್ಯಾರೆಟ್, ಕಲ್ಲಂಗಡಿ ಹಣ್ಣುಗಳನ್ನು ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಡಿಕೆಎಸ್ ಚಾರಿಟಬಲ್ ಸಂಸ್ಥೆ ಆಶ್ರಯದಲ್ಲಿ ಉಚಿತವಾಗಿ ಮನೆಮನೆಗೆ ತೆರಳಿ ಹಂಚಿಕೆ ಮಾಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.