ADVERTISEMENT

ಕುಣಿಗಲ್‌: ಸಂವಿಧಾನ ಸಂರಕ್ಷಣಾ ಪಡೆ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 7:59 IST
Last Updated 17 ಜುಲೈ 2025, 7:59 IST
ಕುಣಿಗಲ್ ಕನ್ನಡ ಭವನದಲ್ಲಿ ನಡೆದ ಸಂವಿಧಾನ ಸಂರಕ್ಷಣಾ ಪಡೆಯ ಸಭೆಯಲ್ಲಿ ಬಾ.ಹ.ರಮಾಕುಮಾರಿ ಮಾತನಾಡಿದರು
ಕುಣಿಗಲ್ ಕನ್ನಡ ಭವನದಲ್ಲಿ ನಡೆದ ಸಂವಿಧಾನ ಸಂರಕ್ಷಣಾ ಪಡೆಯ ಸಭೆಯಲ್ಲಿ ಬಾ.ಹ.ರಮಾಕುಮಾರಿ ಮಾತನಾಡಿದರು   

ಕುಣಿಗಲ್: ‘ಸರ್ವರಿಗೂ ಸಮಬಾಳು, ಸಮಪಾಲು’ ಎಂಬ ಸಂವಿಧಾನದ ಆಶಯ ಇನ್ನೂ ಈಡೇರದ ಕಾರಣ ಸಂವಿಧಾನ ರಕ್ಷಣೆಗೆ ಸಂವಿಧಾನ ಸಂರಕ್ಷಣಾ ಪಡೆ ಅಸ್ಥಿತ್ವಕ್ಕೆ ಬಂದಿದೆ ಎಂದು ಜಿಲ್ಲಾ ಪಡೆ ಸಂಚಾಲಕಿ ಬಾ.ಹ.ರಮಾಕುಮಾರಿ ತಿಳಿಸಿದರು.

ಪಟ್ಟಣದ ಕನ್ನಡ ಭವನದಲ್ಲಿ ಬುಧವಾರ ತಾಲ್ಲೂಕು ಸಮಿತಿ ರಚನೆಗಾಗಿ ನಡೆದ ಸಭೆಯಲ್ಲಿ ಮಾತನಾಡಿದರು.

ಕೇಂದ್ರದಲ್ಲಿ ಕಾಂಗ್ರಸ್‌ನ ವೈಫಲ್ಯ, ತಪ್ಪುಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ದೇಶವನ್ನು ನೈತಿಕ, ಆರ್ಥಿಕ, ರಾಜಕೀಯವಾಗಿಯೂ ಕುರುಕ್ಷೇತ್ರವನ್ನಾಗಿಸಿದೆ. ಕಾರ್ಪೋರೆಟ್ ಕಂಪನಿಗಳ ಪರವಾಗಿರುವ ಕೇಂದ್ರ ಸರ್ಕಾರ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿ ಸಾಗುತ್ತಿದೆ. ಸ್ವತಂತ್ರ ಜಾಗದಲ್ಲಿ ಸರ್ವಾಧಿಕಾರ, ಸಮಾನತೆಯ ಜಾಗದಲ್ಲಿ ಬಲಾಡ್ಯರ ಅಭಿವೃದ್ಧಿ, ಸೋದರತ್ವ ಜಾಗದಲ್ಲಿ ಸನಾತನವಾದ, ಸಾಮಾಜಿಕ ನ್ಯಾಯದ ಜಾಗದಲ್ಲಿ ಮೇಲ್ವರ್ಗವರಿಗೆ ಮೇಲ್ಪಂಕ್ತಿ ನೀತಿ ಜಾರಿಗೆ ತರಲಾಗುತ್ತಿದೆ. ಸಂವಿಧಾನದ ಆಶಯಗಳನ್ನು ಈಡೇರಿಸಲು, ಜನಜಾಗೃತಿ ಮೂಡಿಸಲು, ಸಂವಿಧಾನ ಸಂರಕ್ಷಣೆ ಸಮಿತಿ ಅಸ್ಥಿತ್ವಕ್ಕೆ ಬಂದಿದೆ. ಸಂಘಟನೆ ಮೂಲಕ ಸಂವಿಧಾನ ಸಂರಕ್ಷಣೆಗೆ ಹೋರಾಟ ನಡೆಸಲಿದೆ ಎಂದರು.

ADVERTISEMENT

ತಾಲ್ಲೂಕು ಪಡೆಗೆ ಇಪ್ಪತ್ತು ಸದಸ್ಯರ ಸಮಿತಿ ರಚಿಸಿದ್ದು, ವನಜಾ, ರಂಗಮ್ಮ, ನರಸಿಂಹಮೂರ್ತಿ, ರಾಮಕೃಷ್ಣ ಮತ್ತು ರಾಮಲಿಂಗಯ್ಯ ಅವರನ್ನು ಸಂಚಾಲಕರಾಗಿ ನೇಮಕ ಮಾಡಲಾಯಿತು.

ಜಿಲ್ಲಾ ಪಡೆ ಸಂಚಾಲಕರಾದ ಇಂದ್ರಮ್ಮ, ರಾಮಕೃಷ್ಣಯ್ಯ, ದೀಪಿಕಾ ಮರಳೂರು, ಲತಾ, ದಲಿತ ನಾರಾಯಣ್, ಸಿದ್ದರಾಜು, ಕೆ.ಬಿ.ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.