ADVERTISEMENT

ಕಾಯ್ದೆ ತಿದ್ದುಪಡಿ ವಿರೋಧಿಸಿ ಪತ್ರ ಚಳವಳಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 7:46 IST
Last Updated 28 ಜುಲೈ 2020, 7:46 IST
ಶಿರಾ ತಾಲ್ಲೂಕಿನ ದೊಡ್ಡಆಲದಮರ ಗ್ರಾಮದಲ್ಲಿ ಸೋಮವಾರ ಚಿಗುರು ಯುವಜನ ಸಂಘದಿಂದ ಪತ್ರ ಚಳವಳಿ ನಡೆಸಲಾಯಿತು
ಶಿರಾ ತಾಲ್ಲೂಕಿನ ದೊಡ್ಡಆಲದಮರ ಗ್ರಾಮದಲ್ಲಿ ಸೋಮವಾರ ಚಿಗುರು ಯುವಜನ ಸಂಘದಿಂದ ಪತ್ರ ಚಳವಳಿ ನಡೆಸಲಾಯಿತು   

ಶಿರಾ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಚಿಗುರು ಯುವಜನ ಸಂಘದ ಸದಸ್ಯರು ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದರು.

ತಾಲ್ಲೂಕಿನ ದೊಡ್ಡ ಆಲದಮರ ಗ್ರಾಮದಲ್ಲಿ ಸೋಮವಾರ ಪತ್ರ ಚಳವಳಿ ನಡೆಸಲಾಯಿತು.

ಸಂಘದ ಅಧ್ಯಕ್ಷ ಮಂಜುನಾಥ್ ಅಮಲಗೊಂದಿ ಮಾತನಾಡಿ, ರಾಜ್ಯದಲ್ಲಿ 1974ರಲ್ಲಿ ಜಾರಿಗೆ ಬಂದ ಭೂ ಸುಧಾರಣೆ ಕಾಯ್ದೆ ಮಹತ್ವಪೂರ್ಣ ಪಾತ್ರ ನಿರ್ವಹಿಸಿದೆ. ಕೃಷಿ ಭೂಮಿ ಉಳ್ಳವರ ಹಿಡಿತಕ್ಕೆ ಒಳಗಾಗದಂತೆ ನಿರ್ಬಂಧ ವಿಧಿಸಲಾಗಿತ್ತು. ರೈತರಲ್ಲದವರಿಗೆ ಕೃಷಿಭೂಮಿಯ ವರ್ಗಾವಣೆ ಮಾಡುವುದನ್ನು ನಿಷೇಧಿಸಲಾಗಿದೆ. ಸರ್ಕಾರ ತಿದ್ದುಪಡಿ ತರುವ ಮೂಲಕ ಭೂಮಿಯನ್ನು ಉಳುವವನ ಕೈಯಿಂದ ಕಿತ್ತು ಊಳಿಸುವವನಿಗೆ ನೀಡುತ್ತಿದೆ ಎಂದು ದೂರಿದರು.

ADVERTISEMENT

ಸಂಘದ ಕಾರ್ಯದರ್ಶಿ ಮಂಜುನಾಥ್ ಆಲದಮರ, ಸದಸ್ಯ ತಿಮ್ಮೇಗೌಡ, ಭ್ರಮರಾಂಬಿಕಾ, ವಿನುತಾ ಮತ್ತು ಶೌರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.