ತುಮಕೂರಿನಲ್ಲಿ ಶುಕ್ರವಾರ ಎಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿರುವ ‘ಬಿಲ್ಡ್‌ಟೆಕ್’ ವಸ್ತು ಪ್ರದರ್ಶನಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿದರು.
ತುಮಕೂರು: ಎಂಜಿನಿಯರ್ಸ್ ಅಸೋಸಿಯೇಷನ್, ಯು.ಎಸ್.ಕಮ್ಯನಿಕೇಷನ್ ಸಹಯೋಗದಲ್ಲಿ ನಗರ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿರುವ ‘ಬಿಲ್ಡ್‌ಟೆಕ್’ ವಸ್ತು ಪ್ರದರ್ಶನಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಶುಕ್ರವಾರ ಚಾಲನೆ ನೀಡಿದರು.
ಒಂದೇ ಸೂರಿನಡಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ವಸ್ತು, ತಾಂತ್ರಿಕ ಸಲಹೆ ನೀಡುವ ಉದ್ದೇಶದಿಂದ ಏರ್ಪಡಿಸಿರುವ ವಸ್ತು ಪ್ರದರ್ಶನ ಗ್ರಾಹಕ ಸ್ನೇಹಿಯಾಗಿದೆ ಎಂದು ಜ್ಯೋತಿಗಣೇಶ್ ಹೇಳಿದರು.
ಗಾಜಿನ ಮನೆ ಹಲವು ನ್ಯೂನತೆಗಳಿಂದ ಕೂಡಿದೆ. ಟೂಡಾ, ಜಿಲ್ಲಾಡಳಿತ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರೆ ನಾವು ಕೈಜೋಡಿಸುತ್ತೇವೆ ಎಂದರು.
ಜಿ.ಪಂ ಸಿಇಒ ಜಿ.ಪ್ರಭು, ‘ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಸೌಲಭ್ಯ ಒದಗಿಸುವುದು ಎಂಜಿನಿಯರುಗಳ ಮುಂದಿರುವ ಸವಾಲು. ಈ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯಬೇಕು’ ಎಂದು ಸಲಹೆ ಮಾಡಿದರು.
ಎಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್.ವಿ.ರಾಮಮೂರ್ತಿ, ಉಪಾಧ್ಯಕ್ಷ ಎಚ್.ಕೆ.ನಟೇಶ್, ಕಾರ್ಯದರ್ಶಿ ಎಂ.ಡಿ.ರಾಜು, ಸಹ ಕಾರ್ಯದರ್ಶಿ ಮಂಗಳಕುಮಾರ್, ಖಜಾಂಚಿ ವೆಂಕಟೇಶ್, ನಿರ್ದೇಶಕರಾದ ಎ.ಸತೀಶ, ರವಿಕುಮಾರ್, ಶ್ರೀಕಂಠಸ್ವಾಮಿ, ಮುಖಂಡರಾದ ಎಸ್.ಪಿ.ಚಿದಾನಂದ್, ಎಂ.ಕೆ.ನಾಗರಾಜರಾವ್, ಆರ್.ಬಸಣ್ಣ, ಮುಕೇಶ್ ಪಾಟೀಲ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.