ಪಾವಗಡ: ವಕೀಲರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಕೀಲರು ಪಟ್ಟಣದ ನ್ಯಾಯಾಲಯ ಕಲಾಪಗಳಿಂದ ಹೊರಗುಳಿದು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಕ್ಷಿದಾರರಿಗಾಗಿ ಹಗಲಿರುಳು ಶ್ರಮಿಸುವ ವಕೀಲರಿಗೆ ಅಗತ್ಯ ಭದ್ರತೆ, ಸೌಕರ್ಯಗಳಿಲ್ಲ. ಜೀವ ವಿಮೆ, ವೈದ್ಯಕೀಯ ವಿಮೆಯಂತಹ ಸವಲತ್ತುಗಳಿಲ್ಲದೆ ಸಮಸ್ಯೆಯಾದಾಗ ವಕೀಲರ ಕುಟುಂಬಗಳು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಪ್ರತಿಭಟನನಿರತರು ಆರೋಪಿಸಿದರು.
ತಾಲ್ಲೂಕು, ಜಿಲ್ಲಾ ವಕೀಲರ ಸಂಘಗಳಿಗೆ ಸಾಕಷ್ಟು ಅನುದಾನವಿಲ್ಲದೆ ಸಮಸ್ಯೆಯಾಗುತ್ತಿದೆ. ಈ ಕೂಡಲೇ ವಕೀಲರ ಸಮಸ್ಯೆ ಬಗೆಹರಿಸಬೇಕು. ವೈದ್ಯಕೀಯ, ಜೀವ ವಿಮಾ ಸೌಲಭ್ಯ ಕಲ್ಪಿಸಬೇಕು. ತಾಲ್ಲೂಕು ವಕೀಲರ ಸಂಘಕ್ಕೆ ₹5 ಲಕ್ಷ, ಜಿಲ್ಲಾ ವಕೀಲರ ಸಂಘಗಳಿಗೆ ತಲಾ ₹10 ಲಕ್ಷ ಅನುದಾನ ಮಂಜೂರು ಮಾಡಬೇಕು ಎಂದು ಪ್ರತಿಭಟನನಿರತ ವಕೀಲರು ಒತ್ತಾಯಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಹನುಮಂತರಾಯುಡು, ಖಜಾಂಚಿ ಕೇಶವರೆಡ್ಡಿ, ಶಿರಾಜ್ ಜಾಫರ್, ಸರೋಜ, ಜ್ಯೋತಿ, ಉಘ್ರಮೂರ್ತಿ, ನಾಗೇಂದ್ರರೆಡ್ಡಿ, ರಂಗನಾಥ್, ಸುಧಾಕರ್, ಮಾರುತಿ, ವಾಸುದೇವಮೂರ್ತಿ, ಮಂಜುನಾಥ್, ಮಲ್ಲಿಕಾರ್ಜುನ, ರಾಮಾಂಜಿ, ಸುಬ್ರಹ್ಮಣ್ಯಂ, ಶಿವಣ್ಣ, ನಾರಾಯಣನಾಯ್ಕ, ಹನುಮಂತರಾಯ, ತೇಜಸ್ವಿನಿ, ರೇಖಾ, ರೂಪ, ಅಶ್ವಿನಿ, ಕವಿತ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.