ADVERTISEMENT

ಚಿರತೆ ಪ್ರತ್ಯಕ್ಷ: ಮೂವರಿಗೆ ಪರಚಿ ಪರಾರಿ

​ಪ್ರಜಾವಾಣಿ ವಾರ್ತೆ
Published 16 ಮೇ 2019, 14:02 IST
Last Updated 16 ಮೇ 2019, 14:02 IST
ಕೊರಟಗೆರೆ ತಾಲ್ಲೂಕಿನ ಗುಂಡಿನಪಾಳ್ಯ ಬಳಿ ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಗುರುವಾರ ಬೀಡು ಬಿಟ್ಟಿದ್ದರು.     
ಕೊರಟಗೆರೆ ತಾಲ್ಲೂಕಿನ ಗುಂಡಿನಪಾಳ್ಯ ಬಳಿ ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಗುರುವಾರ ಬೀಡು ಬಿಟ್ಟಿದ್ದರು.        

ಕೊರಟಗೆರೆ: ಆಹಾರ ಹರಸಿ ಬಂದ ಚಿರತೆ ಮೂವರ ಮೇಲೆ ದಾಳಿ ನಡೆಸಿರುವ ಘಟನೆ ತಾಲ್ಲೂಕಿನ ಗುಂಡನಪಾಳ್ಯದಲ್ಲಿ ಗರುವಾರ ಬೆಳಿಗ್ಗೆ ನಡೆದಿದೆ.

ತಾಲ್ಲೂಕಿನ ಹುಲಿಕುಂಟೆ ವ್ಯಾಪ್ತಿಯ ಗುಂಡನಪಾಳ್ಯ ಗ್ರಾಮದ ಕಾಮರಾಜು ಎಂಬುವರಿಗೆ ಸೇರಿದ ಅಡಕೆ ತೋಟದಲ್ಲಿ ಗುರುವಾರ ಬೆಳಿಗ್ಗೆ ಚಿರತೆ ಕಾಣಿಸಿಕೊಂಡಿದೆ.

ಈ ಸಂದರ್ಭದಲ್ಲಿ ಅಟ್ಟಿಸಲು ಹೋದ ಮೂರು ಜನ ಯುವಕರ ಮೇಲೆ ದಾಳಿ ನಡೆಸಿದ್ದು, ಪರಚಿದ ಗಾಯಗಳಾಗಿದೆ. ಗ್ರಾಮದ ಶ್ರೀಧರ, ಹರೀಶ್ ಬಾಬು, ನಟರಾಜು ಗಾಯಗೊಂಡವರು.

ADVERTISEMENT

ಈ ಸಂದರ್ಭದಲ್ಲಿ ಸ್ಥಳದಲ್ಲಿ ಇದ್ದ ಅರಣ್ಯ ಇಲಾಖೆ ಜೀಪ್ ಡ್ರೈವರ್ ವೇಣುಗೋಪಾಲ್ ಎಂಬುವರಿಗೂ ತರಚಿದ ಗಾಯಗಳಾಗಿದೆ. ಸಾರ್ವಜನಿಕರ ಕೂಗಾಟದಿಂದ ಅಲ್ಲಿಂದ ಪರಾರಿಯಾಗಿದೆ.

ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿ ಸತೀಶ್ ಚಂದ್ರ, ಸಿಪಿಐ ಎಫ್.ಕೆ. ನದಾಫ್ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.