ADVERTISEMENT

ತುರುವೇಕೆರೆ: ಬೋನಿಗೆ ಬಿದ್ದ ಹೆಣ್ಣು ಚಿರತೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 5:30 IST
Last Updated 17 ಡಿಸೆಂಬರ್ 2025, 5:30 IST
ತುರುವೇಕೆರೆ ತಾಲ್ಲೂಕಿನ ಮಲ್ಲಾಘಟ್ಟ ಸಮೀಪದ ಯಡೇಹಳ್ಳಿ ಗ್ರಾಮದ ತೋಟದ ಮನೆಯ ಬಳಿ ಅರಣ್ಯ ಇಲಾಖೆ ಸಿಬ್ಬಂದಿಗಳು ಇರಿಸಿದ್ದ ಬೋನಿಗೆ ಬಿದ್ದ ಚಿರತೆ 
ತುರುವೇಕೆರೆ ತಾಲ್ಲೂಕಿನ ಮಲ್ಲಾಘಟ್ಟ ಸಮೀಪದ ಯಡೇಹಳ್ಳಿ ಗ್ರಾಮದ ತೋಟದ ಮನೆಯ ಬಳಿ ಅರಣ್ಯ ಇಲಾಖೆ ಸಿಬ್ಬಂದಿಗಳು ಇರಿಸಿದ್ದ ಬೋನಿಗೆ ಬಿದ್ದ ಚಿರತೆ    

ತುರುವೇಕೆರೆ: ತಾಲ್ಲೂಕಿನ ಮಲ್ಲಾಘಟ್ಟ ಸಮೀಪದ ಯಡೇಹಳ್ಳಿ ಗ್ರಾಮದ ತೋಟದ ಮನೆಯ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಸೋಮವಾರ ರಾತ್ರಿ ಬಿದ್ದಿದೆ.

ಹಲವು ದಿನಗಳಿಂದ ಯಡೇಹಳ್ಳಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಉಂಟುಮಾಡಿತ್ತು. ನಾಯಿ ಮತ್ತು ಮೇಕೆಯನ್ನು ಹಿಡಿದಿದ್ದರಿಂದ ಭಯಗೊಂಡ ಗ್ರಾಮಸ್ಥರು ತಿಪಟೂರು ಅರಣ್ಯ ವಲಯಾಧಿಕಾರಿ ಗಮನಕ್ಕೆ ತಂದು ಬೋನ್ ಇಡಲಾಗಿತ್ತು. ಎಂದಿನಂತೆ ಆಹಾರ ಹರಸಿ ಬಂದ ಚಿರತೆ ಬೋನಿಗೆ ಬಿದ್ದಿದೆ.

ವಿಷಯ ತಿಳಿದು ಆಸುಪಾಸು ಗ್ರಾಮದ ಸಾಕಷ್ಟು ಸಂಖ್ಯೆಯ ಜನರು ದೌಡಾಯಿಸಿದರು. ಸ್ಥಳಕ್ಕೆ ತಿಪಟೂರು ಅರಣ್ಯ ಇಲಾಖೆ ಆರ್‌ಎಫ್‌ಒ ಮಧು ಸೇರಿದಂತೆ ಸಿಬ್ಬಂದಿ  ಭೇಟಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.