
ತುರುವೇಕೆರೆ: ತಾಲ್ಲೂಕಿನ ಅರೇಮಲ್ಲೇನಹಳ್ಳಿ ಹೊರವಲಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿದಿದ್ದಾರೆ.
ಡಿ.21ರಂದು ಸುಜಾತಾ ಎಂಬ ಮಹಿಳೆಯನ್ನು ಚಿರತೆ ದಾಳಿ ಮಾಡಿ ಕೊಂದಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಆಕ್ರೋಶದ ಮೇರೆಗೆ ಅರಣ್ಯ ಇಲಾಖೆ ಗ್ರಾಮದಲ್ಲಿ ನಾಲ್ಕು ಬೋನುಗಳನ್ನು ಇಟ್ಟಿತ್ತು. ಡಿ.22ರಂದು 8 ವರ್ಷದ ಗಂಡು ಚಿರತೆ ಸೆರೆ ಸಿಕ್ಕಿತ್ತು. ಡಿ 23ರಂದು 5 ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.
ಅರೇಮಲ್ಲೇನಹಳ್ಳಿ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಇದ್ದಾರೆ. ಡ್ರೋನ್ ಕ್ಯಾಮೆರಾ, ಸಿಸಿ ಟಿವಿ ಕ್ಯಾಮರಾ ಸೇರಿದಂತೆ ವಿವಿಧ ತಂತ್ರಜ್ಞಾನ ಬಳಸಿ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಕಾರ್ಯಮಗ್ನವಾಗಿದೆ ಎಂದು ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿ ಅಮಿತ್ ತಿಳಿಸಿದ್ದಾರೆ.
ಚಿರತೆಯ ಚಲನವಲನವನ್ನು ಗಂಭೀರವಾಗಿ ಗಮನಿಸಲಾಗುತ್ತಿದೆ. ಸದ್ಯಕ್ಕೆ ಯಾವುದೇ ಕುರುಹು ಸಿಕ್ಕಂತೆ ಇಲ್ಲ. ಆದರೂ ಸಹ ಈಗ ಎರಡು ಬೋನುಗಳನ್ನು ಇಡಲಾಗಿದೆ. ಇಂದು ಮತ್ತೆ ನಾಳೆಯೊಳಗೆ ಮತ್ತೆ ಎರಡು ಬೋನುಗಳನ್ನು ಇಟ್ಟು ಚಿರತೆಯನ್ನು ಸೆರೆ ಹಿಡಿಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
ಮಹಿಳೆಯನ್ನು ಕೊಂದ ಚಿರತೆ ಯಾವುದು ಎಂಬುದು ವೈದ್ಯಕೀಯ ಪರೀಕ್ಷೆ ಮಾಡಿದ ನಂತರವೇ ತಿಳಿಯಲಿದೆ. ಈಗ ಸಿಕ್ಕಿರುವ ಚಿರತೆಗಳೊ ಅಥವಾ ಬೇರೆಯೊ ಎಂಬುದನ್ನು ಮಹಿಳೆಯ ರಕ್ತ ಮತ್ತು ಈ ಎರಡೂ ಚಿರತೆಗಳ ರಕ್ತವನ್ನು ಪರೀಕ್ಷಿದ ನಂತರವೇ ತಿಳಿಯಲಿದೆ ಎಂದು ಅಮಿತ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.