pokಶಿರಾ: ಪಾಕ್ ಆಕ್ರಮಿತ ಕಾಶ್ಮೀರ ಮತ್ತೆ ಭಾರತಕ್ಕೆ ಸೇರುವ ಮೂಲಕ ನಮ್ಮ ದೇಶದ ಭೂಪಟ ವಿಸ್ತಾರವಾಗಬೇಕು ಎಂದು ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ದೊದ್ದಬಾಣಗೆರೆ ಗ್ರಾಮದಲ್ಲಿ ನಡೆದ ವೀರ ಆಂಜನೇಯ, ಶಿವ ಪಾರ್ವತಿ, ಮಹಾಗಣಪತಿ ಹಾಗೂ ನಾಗದೇವತಾ ಪ್ರತಿಷ್ಟಾಪನಾ ಮಹೋತ್ಸವದಲ್ಲಿ ಮಾತನಾಡಿದರು.
ಗಡಿಯಲ್ಲಿ ಸೈನಿಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಕಠಿಣ ಸಮಯದಲ್ಲಿ ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ಎಲ್ಲಾ ನಿರ್ಧಾರಗಳಿಗೂ ಪಕ್ಷಾತೀತವಾಗಿ ಕೈಜೋಡಿಸುವ ಮೂಲಕ ದೇಶದ ಸಾರ್ವಭೌಮತೆ ಎತ್ತಿಹಿಡಿದ್ದಾರೆ ಎಂದರು.
ಮದಲೂರು ಕರೆ ತುಂಬಿದ ನಂತರ ದೊಡ್ಡಬಾಣಗೆರೆ ಕೆರೆಗೆ ಹೇಮಾವತಿ ನೀರು ಹರಿಸುವ ಬೇಡಿಕೆ ಇಟ್ಟಿದ್ದೆವು, ಭದ್ರಾ ಹಾಗೂ ಹೇಮಾವತಿ ಎರಡು ನೀರು ಬರಲಿ ಎಂದರು.
ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಭದ್ರಾ ನೀರು ತರುವಾಗ ಪ್ರಕೃತಿ ಮತ್ತು ಜನರನ್ನು ಉಳಿಸಲು ಅನೇಕ ತಂತ್ರಗಳನ್ನು ಮಾಡಲಾಗುತ್ತಿದೆ. ದೊಡ್ಡಬಾಣಗೆರೆ ಕೆರೆಗೆ ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ನೀರನ್ನೂ ಕೊಡಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ನಾಲ್ಕು ದೇವರ ಸಂಗಮದಲ್ಲಿ ಕೆರೆಯ ದಡದಲ್ಲಿ ದೇವಾಲಯ ನಿರ್ಮಾಣವಾಗಿದೆ. ಇದು ಗ್ರಾಮ ಏಳಿಗೆಗೆ ಉತ್ತಮ ಸಂದೇಶ ಸಾರುವಂತಿದೆ ಎಂದರು.
ವನಕಲ್ಲು ಸಂಸ್ಥಾನ ಮಠದ ಪೀಠಾಧ್ಯಕ್ಷ ಬಸವರಮಾನಂದ ಸ್ವಾಮೀಜಿ, ವಿಎಸ್‌ಎಸ್‌ಎನ್ ಅಧ್ಯಕ್ಷ ಬಿ.ಹಲುಗುಂಡೇಗೌಡ, ಬಿ.ಎಚ್.ಗುಜ್ಜಾರಪ್ಪ, ಎಸ್.ರಾಮಕೃಷ್ಣ, ಅಜ್ಜೇಗೌಡ, ರಂಗನಾಥಪ್ಪ, ಬಿ.ವಿ.ಗುಂಡಪ್ಪ, ಮಲ್ಲಮ್ಮ ಕಾಂತರಾಜ್, ರೂಪಾ ನರಸಪ್ಪ, ಜಿ.ರಾಜಣ್ಣ, ಹನುಮಂತರಾಯಪ್ಪ, ಶ್ರೀರಾಮೇಗೌಡ, ಪುಟ್ಟೀರಪ್ಪ, ಕ್ಯಾದಿಗುಂಟೆ ತಿಪ್ಪೇಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.