ADVERTISEMENT

ಪಿಂಚಣಿಗಾಗಿ ಸಿ.ಎಂ ಗೆ ಪತ್ರ

ತುಮಕೂರು ಜಿಲ್ಲಾ ಪಿಂಚಣಿ ವಂಚಿತ ನೌಕರರ ಸಂಘದಿಂದ ಚಳವಳಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 19:30 IST
Last Updated 16 ಆಗಸ್ಟ್ 2019, 19:30 IST
ಪತ್ರ ಚಳವಳಿಯಲ್ಲಿ ಪಾಲ್ಗೊಂಡಿದ್ದ ನೌಕರರು
ಪತ್ರ ಚಳವಳಿಯಲ್ಲಿ ಪಾಲ್ಗೊಂಡಿದ್ದ ನೌಕರರು   

ತುಮಕೂರು: ಜಿಲ್ಲಾ ಪಿಂಚಣಿ ವಂಚಿತ ನೌಕರ ಸಂಘದಿಂದ ಪಿಂಚಣಿ ಕೋರಿ ಮುಖ್ಯಮಂತ್ರಿ ಅವರಿಗೆ ಜಿಲ್ಲಾ ‌‌ಅಂಚೆ ಕಚೇರಿ ಬಳಿ ಮನವಿ ಪತ್ರ ಬರೆದರು. ಆ ಮೂಲಕ ಪತ್ರ ಚಳವಳಿಗೆ ಚಾಲನೆ ನೀಡಿದರು.

ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಕಾರ್ಯಾಧ್ಯಕ್ಷ ಶಶಿಧರ, ಉಪಾಧ್ಯಕ್ಷರಾದ ಸಿ.ಡಿ.ರವಿ, ವೆಂಟಾಚಲ, ಜಿಲ್ಲಾ ಘಟಕದ ಧರ್ಮೇಂದ್ರಪ್ರಸಾದ್, ಹನುಮೇಶ್, ರವೀಶ್, ದಿನೇಶ್, ನಟೇಶ್, ಸಿದ್ದೇಶ್, ಮಧು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

‘2006ರ ನಂತರ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ನಿವೃತ್ತಿ ನಂತರ ಯಾವುದೇ ಪಿಂಚಣಿ ವ್ಯವಸ್ಥೆ ಇಲ್ಲ. ಈ ಸಮಸ್ಯೆ ಪರಿಹರಿಸಿ ನೌಕರರಿಗೆ ಅನುಕೂಲ ಮಾಡಿಕೊಡುವಂತೆ ಕರ್ನಾಟಕ ರಾಜ್ಯ ಪಿಂಚಣಿ ವಂಚಿತ ನೌಕರರ ಸಂಘ 13 ವರ್ಷ ಗಳಿಂದಲೂ ಸರ್ಕಾರಗಳನ್ನು ಆಗ್ರಹಿಸುತ್ತಿದೆ. ಆದರೂ ಪ್ರಯೋಜನ ಆಗಿಲ್ಲ ಎಂದು ಪದಾಧಿಕಾರಿಗಳು ದೂರಿದರು.

ADVERTISEMENT

ಯಡಿಯೂರಪ್ಪ ಅವರು ಈಗ ಮುಖ್ಯಮಂತ್ರಿ ಆಗಿದ್ದಾರೆ. ಈ ಹಿಂದೆ ಅವರು ಮುಖ್ಯಮಂತ್ರಿ ಆಗಿದ್ದಾಗ ಅನುದಾನಿತರ ಪಿಂಚಣಿ ಬಗ್ಗೆ ಕಾಳಜಿ ತೋರಿದ್ದರು. ಮತ್ತೊಮ್ಮೆ ಅವರಿಗೆ ಪಿಂಚಣಿ ವಿಚಾರವಾಗಿ ಮನವಿ ಸಲ್ಲಿಸಲಾಗುವುದು. ರಾಜ್ಯದ 60 ಸಾವಿರ ಪಿಂಚಣಿ ವಂಚಿತ ನೌಕರರು ಪತ್ರ ಚಳವಳಿಯಲ್ಲಿ ಪಾಲ್ಗೊಳ್ಳುವರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.