ADVERTISEMENT

ಕ್ಷೌರದಂಗಡಿ ಮೇಲೆ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 16:12 IST
Last Updated 7 ಏಪ್ರಿಲ್ 2020, 16:12 IST

ತುಮಕೂರು: ಲಾಕ್‌ಡೌನ್‌ ನಡುವೆಯೂ ಕ್ಷೌರದಂಗಡಿ ತೆರೆದು ಸೇವೆ ನೀಡುತ್ತಿದ್ದ ಆರೋಪದ ಮೇಲೆ ಕೋತಿತೋಪು ವೃತ್ತದ ಸೆಲೆಕ್ಟ್‌ ಹೇರ್‌ ಡ್ರೆಸಸ್‌ ಅಂಗಡಿಯ ಕೆಲಸಗಾರರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಗತ್ಯ ವಸ್ತುಗಳ ಸೇವೆಗಳನ್ನು ಹೊರತುಪಡಿಸಿ ಯಾವುದೇ ಅಂಗಡಿಗಳನ್ನು ತೆಗೆಯದಂತೆ ಆದೇಶ ಇದ್ದರೂ ಕ್ಷೌರದಂಗಡಿ ತೆರೆದು ಜನರಿಗೆ ಹೇರ್‌ ಕಟ್ಟಿಂಗ್‌ ಮಾಡಲಾಗುತ್ತಿತ್ತು. ಲಾಕ್‌ಡೌನ್‌ ಆದೇಶ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನಗತ್ಯ ಓಡಾಟ: ನಿಷೇಧಾಜ್ಞೆ ಜಾರಿಯಲ್ಲಿ ಇದ್ದರೂ, ಅನಗತ್ಯವಾಗಿ ಹೆಗ್ಗೆರೆ ಚೆಕ್‌ ಪೋಸ್ಟ್‌ ಬಳಿಯ ವಕ್ಕೋಡಿ ರಸ್ತೆಯಲ್ಲಿ ಹೋಗುತ್ತಿದ್ದ ಇಬ್ಬರು ಸವಾರರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಸವಾರರು ಅನಗತ್ಯವಾಗಿ ಓಡಾಡುವುದನ್ನು ಡ್ರೋನ್‌ ಕ್ಯಾಮೆರಾ ಮೂಲಕ ಪತ್ತೆಹಚ್ಚಿ ಈ ಕ್ರಮ ಜರುಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.