ADVERTISEMENT

ತುಮಕೂರು | ಲೋಕ್ ಅದಾಲತ್‌: 1,167 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 2:20 IST
Last Updated 18 ಜುಲೈ 2025, 2:20 IST
ಕೋರ್ಟ್ (ಸಾಂದರ್ಭಿಕ ಚಿತ್ರ)
ಕೋರ್ಟ್ (ಸಾಂದರ್ಭಿಕ ಚಿತ್ರ)   

ಗುಬ್ಬಿ: ಪಟ್ಟಣದ ನ್ಯಾಯಾಲಯದಲ್ಲಿ 7,170 ಪ್ರಕರಣಗಳು ಬಾಕಿ ಇದ್ದು, ಲೋಕ್ ಅದಾಲತ್‌ನಲ್ಲಿ 1,417 ಪ್ರಕರಣ ತೆಗೆದುಕೊಳ್ಳಲಾಗಿತ್ತು. ಅವುಗಳಲ್ಲಿ 1,167 ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಜಿಲ್ಲೆಯಲ್ಲಿಯೇ ಉತ್ತಮ ಸಾಧನೆ ಮಾಡಲಾಗಿದೆ ಎಂದು ನ್ಯಾಯಾಧೀಶೆ ಅನುಪಮ ಡಿ. ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿವಿಲ್ ವ್ಯಾಜ್ಯ, ಕೌಟುಂಬಿಕ ದೌರ್ಜನ್ಯ, ವಿವಾಹ ವಿಚ್ಛೇದನ ಪ್ರಕರಣ ಒಳಗೊಂಡಂತೆ ಸಣ್ಣ ಪುಟ್ಟ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಮೂಲಕ ಕಕ್ಷಿದಾರರಿಗೆ ನೆಮ್ಮದಿ ನೀಡಲಾಗಿದೆ. ಬ್ಯಾಂಕ್‌ಗಳಲ್ಲಿ ಸುಸ್ತಿಯಾಗಿದ್ದ ಹಣವನ್ನು ಕಕ್ಷಿದಾರರಿಂದ ಕಟ್ಟಿಸುವ ಮೂಲಕ 2.5 ಕೋಟಿ ವಸೂಲಾತಿಯಾಗಿದೆ ಎಂದು ಹೇಳಿದರು.

ನ್ಯಾಯಾಧೀಶೆ ಪೂರ್ಣಿಮಾ ಕೆ. ಯಾದವ್ ಮಾತನಾಡಿ, ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಗಳ ಮನವೊಲಿಸಿ ಒಂದುಗೂಡಿಸಲಾಗಿದೆ ಎಂದರು.

ADVERTISEMENT

ನ್ಯಾಯಾಧೀಶರಾದ ಕಿರಣ್ ಎಸ್‌.ಪಿ., ಮೇಧ, ವಕೀಲರು, ವಕೀಲರ ಸಂಘದ ಅಧ್ಯಕ್ಷ, ಪದಾಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.