ADVERTISEMENT

ಜನೌಷಧಿ ಕೇಂದ್ರಕ್ಕೆ ಜನರ ಹುಡುಕಾಟ!

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 5:53 IST
Last Updated 18 ಜನವರಿ 2023, 5:53 IST
ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಯ ಮೂಲೆಯಲ್ಲಿರುವ ಜನೌಷಧಿ ಕೇಂದ್ರ
ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಯ ಮೂಲೆಯಲ್ಲಿರುವ ಜನೌಷಧಿ ಕೇಂದ್ರ   

ಮಧುಗಿರಿ: ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಔಷಧಿ ಒದಗಿಸಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಪ್ರಾರಂಭಿಸಿದೆ. ಆದರೆ, ಪಟ್ಟಣದಲ್ಲಿ ಪ್ರಾರಂಭವಾಗಿ ಹಲವು ವರ್ಷ ಕಳೆದರೂ ಜನರಿಗೆ ಮಾತ್ರ ಈ ಕೇಂದ್ರ ಎಲ್ಲಿದೆ ಎಂದು ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರ ಪ್ರಾರಂಭ ಮಾಡಿರುವುದರಿಂದ ಬಡ ಜನರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳು ದೊರೆಯುತ್ತಿವೆ. ಇದರಿಂದ ಸಾಕಷ್ಟು ಅನುಕೂಲವಾಗುತ್ತಿದೆ.

ಆದರೆ, ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಕೇಂದ್ರ ಇಲ್ಲ ಎಂಬುದು ಜನರ ದೂರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮೂಲೆಯಲ್ಲಿ ಜನೌಷಧಿ ಕೇಂದ್ರ ಇರುವುದರಿಂದ ಜನರು ಕೇಂದ್ರವನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಆಸ್ಪತ್ರೆಯ ರಸ್ತೆಯಲ್ಲಿ ಏಳಕ್ಕೂ ಖಾಸಗಿ ಮೆಡಿಕಲ್ ಸ್ಟೋರ್‌ಗಳಿವೆ. ಆದರೆ, ಜನೌಷಧಿ ಕೇಂದ್ರವು ಜನರ ಕಣ್ಣಿಗೆ ಕಾಣದ ರೀತಿಯಲ್ಲಿ ಇರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ಈ ಸ್ಥಳದಲ್ಲಿ ಕೇಂದ್ರ ತೆರೆದರೆ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಗ್ರಾಹಕ ಮಂಜುನಾಥ ತಿಳಿಸಿದರು.

ಆಸ್ಪತ್ರೆಯ ಮೂಲೆಯಲ್ಲಿರುವ ಜನೌಷಧಿ ಕೇಂದ್ರವನ್ನು ಜನರಿಗೆ ಅನುಕೂಲವಾಗುವಂತೆ ನಿಗದಿತ ಸ್ಥಳದಲ್ಲಿ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.