ADVERTISEMENT

ಮದ್ದನಹಳ್ಳಿ ಉಪನಾಲೆ: ಇಬ್ಬರು ಯುವಕರು ನೀರುಪಾಲು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 16:29 IST
Last Updated 27 ಸೆಪ್ಟೆಂಬರ್ 2020, 16:29 IST
ತುರುವೇಕೆರೆ ತಾಲ್ಲೂಕಿನ ಮಾಯಸಂದ್ರಹೋಬಳಿಯ ಮದ್ದನಹಳ್ಳಿ ಬಳಿಯ ಉಪನಾಲೆಯಲ್ಲಿ ಕೈ ಕಾಲು ತೊಳೆಯಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಶವ ಶೋಧ ಕಾರ್ಯ ಮಾಡುತ್ತಿರುವ ಪೊಲೀಸರು.
ತುರುವೇಕೆರೆ ತಾಲ್ಲೂಕಿನ ಮಾಯಸಂದ್ರಹೋಬಳಿಯ ಮದ್ದನಹಳ್ಳಿ ಬಳಿಯ ಉಪನಾಲೆಯಲ್ಲಿ ಕೈ ಕಾಲು ತೊಳೆಯಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಶವ ಶೋಧ ಕಾರ್ಯ ಮಾಡುತ್ತಿರುವ ಪೊಲೀಸರು.   

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಮದ್ದನಹಳ್ಳಿ ಬಳಿ ಉಪನಾಲೆಯಲ್ಲಿ ಕೈ ಕಾಲು ತೊಳೆಯಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ.

ಬೆಂಗಳೂರು ಮತ್ತು ಮಾಗಡಿಯವರಾದ ಯುವಕರು ಬೆಂಗಳೂರಿನ ಏಷ್ಯಯನ್ ಪೇಯಿಂಟ್ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪಟ್ಟಣದ ಬಣ್ಣದ ಅಂಗಡಿಗೆ ಬಣ್ಣದ ಬಾಕ್ಸ್‌ ಇಳಿಸಿ ವಾಪಸ್ ತೆರಳುತ್ತಿರುವಾಗ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಮದ್ದನಹಳ್ಳಿ ಬಳಿ ಕೈಕಾಲು ತೊಳೆಯಲು ನೀರಿಗೆ ಇಳಿದಿದ್ದರು. ಇಬ್ಬರು ರಭಸವಾಗಿ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಒಬ್ಬರು ಬಚಾವಾಗಿದ್ದಾರೆ.

ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರೊಡಗೂಡಿ ಶವ ಶೋಧ ಕಾರ್ಯಚರಣೆ ನಡೆಸಿದ್ದಾರೆ.

ADVERTISEMENT

ಶೋಧ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಉಪನಾಲೆ ನೀರು ನಿಲ್ಲಿಸುವಂತೆ ಭಾನುವಾರ ಸಂಜೆಯಿಂದ ಹೇಮಾವತಿ ಎಂಜಿನಿಯರ್‌ಗೆ ಪೊಲೀಸರು ಹಲವು ಗಂಟೆ ಕರೆ ಮಾಡಿದರೂ ಸ್ವೀಕರಿಸದಿದ್ದರಿಂದ ನಾಲೆ ಬಳಿಯಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.