ADVERTISEMENT

ಮಧುಗಿರಿ | ಯೂರಿಯಾ ಖರೀದಿಗೆ ರೈತರ ಸಾಲು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 7:13 IST
Last Updated 24 ಸೆಪ್ಟೆಂಬರ್ 2025, 7:13 IST
ಮಧುಗಿರಿ ಗೊಬ್ಬರ ಅಂಗಡಿ ಮುಂಭಾಗ ಯೂರಿಯಾ ಖರೀದಿಗೆ ರೈತರ ಸಾಲು
ಮಧುಗಿರಿ ಗೊಬ್ಬರ ಅಂಗಡಿ ಮುಂಭಾಗ ಯೂರಿಯಾ ಖರೀದಿಗೆ ರೈತರ ಸಾಲು   

ಮಧುಗಿರಿ: ಪಟ್ಟಣದ ಗೊಬ್ಬರ ಅಂಗಡಿ ಮುಂಭಾಗ ಮಂಗಳವಾರ ತಾಲ್ಲೂಕಿನ ರೈತರು ಮುಗಿಬಿದ್ದು ಯೂರಿಯಾ ಖರೀದಿಸಿದರು.

ಪಟ್ಟಣದ ಗೊಬ್ಬರದ ಅಂಗಡಿಗಳಿಗೆ ಯೂರಿಯಾ ಪೂರೈಕೆಯಾಗಿರುವ ವಿಷಯ ತಿಳಿದ ರೈತರು ತಮ್ಮ ಆಧಾರ್ ಕಾರ್ಡ್‌ಗಳನ್ನು ಕೈಯಲ್ಲಿ ಹಿಡಿದು ಸಾಲಿನಲ್ಲಿ ನಿಂತು ಖರೀದಿಗೆ ಮುಂದಾದರು.

ಮಳೆ ಬಂದಾಗ ಯೂರಿಯಾಗೆ ಬೇಡಿಕೆ ಹೆಚ್ಚಾಗಿದ್ದು, ರೈತರಿಗೆ ಬೇಕಾಗುವಷ್ಟು ಗೊಬ್ಬರ ಕೊಡಬೇಕು. ಆದರೆ ಗೊಬ್ಬರದ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರವೇ ಸಿಗುತ್ತಿಲ್ಲ. ಇದರಿಂದಾಗಿ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ರೈತ ಕೃಷ್ಣಪ್ಪ ಆಗ್ರಹಿಸಿದರು.

ADVERTISEMENT

ರೈತರಿಗೆ ಅಗತ್ಯವಿರುವ ಬೀಜ ಮತ್ತು ಯೂರಿಯಾ ಗೊಬ್ಬರಕ್ಕೆ ಸಾಕಷ್ಟು ಬೇಡಿಕೆಯಿದ್ದರೂ, ಸರ್ಕಾರ ಪೂರೈಸದೇ ನಿರ್ಲಕ್ಷ್ಯ ವಹಿಸಿರುವುದರಿಂದ ಈ ರೀತಿಯ ಸಮಸ್ಯೆ ಎದುರಾಗಿದೆ. ತಕ್ಷಣ ಸರ್ಕಾರವೇ ಈ ಸಮಸ್ಯೆ ತಿಳಿಗೊಳಿಸಬೇಕು ಎಂದು ರೈತ ರಂಗನಾಥಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.