ADVERTISEMENT

ಗುರುವಾರ ಹುಳಿಯಾರು ಬಂದ್‌

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 15:58 IST
Last Updated 20 ನವೆಂಬರ್ 2019, 15:58 IST

ಹುಳಿಯಾರು: ಪಟ್ಟಣದ ಪೆಟ್ರೋಲ್‌ ಬಂದ್‌ ವೃತ್ತಕ್ಕೆ ಕನಕದಾಸ ವೃತ್ತ ಎಂದು ಹೆಸರಿಡುವಂತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಕಾಗಿನೆಲೆ ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ಗುರುವಾರ ಹುಳಿಯಾರು ಬಂದ್‌ಗೆ ಕರೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ ತಿಳಿಸಿದರು.

ಸಚಿವರು ಕುರುಬ ಸಮಜದ ಈಶ್ವರಾನಂದಸ್ವಾಮೀಜಿ ಇದ್ದ ಶಾಂತಿಸಭೆಯಲ್ಲಿ ಅವರ ಮಾತನ್ನು ಪರಿಗಣಿಸದೆ ದೌರ್ಜನ್ಯದಿಂದ ವರ್ತಿಸಿದ್ದಾರೆ ಎಂದು ದುರ್ಗಾಪರಮೇಶ್ವರಿ ದೇಗುಲದ ಧರ್ಮದರ್ಶಿ ಪಟಾಕಿ ಶಿವಣ್ಣನವರ ಮನೆಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಕನಕದಾಸ ವೃತ್ತದ ವಿವಾದದ ಸಂಬಂಧ ಹದಿನೆಂಟು ಸಮುದಾಯದ ಜನ ಸೇರಿ ಸಭೆ ನಡೆಸಲಾಗಿದೆ. ಸಭೆಯ ತೀರ್ಮಾನದಂತೆ ಗುರುವಾರ ಹುಳಿಯಾರು ಬಂದ್‍ಗೆ ಕರೆ ನೀಡಲಾಗಿದ್ದು ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ಹಾಗೂ 11 ಗಂಟೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ADVERTISEMENT

ಗೋಷ್ಟಿಯಲ್ಲಿ ಅಶೋಕ್‌, ಉಮೇಶ್‌, ಪಟೇಲ್‌ ರಾಜ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.