ADVERTISEMENT

ಜಾತಿ ಗಣತಿ: ‘ಮಾದಿಗ’ ಎಂದು‌ ನಮೂದಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 1 ಮೇ 2025, 13:56 IST
Last Updated 1 ಮೇ 2025, 13:56 IST

ಮಧುಗಿರಿ: ಜಾತಿ ಗಣತಿಯ ನಮೂನೆಯ ಕಲಂ 61ರಲ್ಲಿ ‘ಮಾದಿಗ ಸಮುದಾಯ’ ಎಂದು ನಮೂದಿಸಬೇಕು ಎಂದು ಜಿ.ಪಂ ಮಾಜಿ ಸದಸ್ಯ ಎಚ್.ಡಿ. ಕೃಷ್ಣಪ್ಪ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳ ಪೈಕಿ ಒಳಮಿಸಲಾತಿ ವರ್ಗೀಕರಣದ ಸಮೀಕ್ಷೆಗೆ ಬರುವ ಅಧಿಕಾರಿಗಳ ಬಳಿ ಯಾವುದೇ ಕಾರಣಕ್ಕೂ ಆದಿ ಕರ್ನಾಟಕ, ಆದಿ ದ್ರಾವಿಡ ಇತ್ಯಾದಿ ಜಾತಿ ಸೂಚಕವಲ್ಲದ ಪದಗಳನ್ನು ಬರೆಸಬಾರದು ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಗೋಪಾಲಯ್ಯ ಮಾತನಾಡಿ, ಮಾದಿಗ ಸಂಬಂಧಿತ ಜಾತಿಗಳು ಸರ್ಕಾರದ ಪ್ರತಿನಿಧಿಗಳು ಜಾತಿ ಸಮೀಕ್ಷೆಗೆ ಬರುತ್ತಿದ್ದು ತಪ್ಪದೆ ಆಯಾ ಗ್ರಾಮದಲ್ಲಿರುವ ವಿದ್ಯಾರ್ಥಿಗಳು, ಯುವಕರು, ಸಂಘಟನೆ ಮುಖಂಡರು ಗ್ರಾಮದ ಯಾವುದೇ ಕುಟುಂಬ ಈ ಜಾತಿ ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದರು.

ADVERTISEMENT

ತಾ.ಪಂ. ಮಾಜಿ ಸದಸ್ಯ ಸೊಸೈಟಿ ರಾಮಣ್ಣ ಮಾತನಾಡಿ, ತಾಲ್ಲೂಕಿನ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವಾಗಬೇಕಿದೆ. ದತ್ತಾಂಶ ಸಂಗ್ರಹಕ್ಕಾಗಿ ಜಿಲ್ಲೆಯಲ್ಲಿ ಮೇ 5ರಿಂದ ಮನೆ ಮನೆ ಸಮೀಕ್ಷೆ ನಡೆಯಲಿದೆ ಎಂದರು.

ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ತೋಂಡೋಟಿ ರಾಮಾಂಜಿನಪ್ಪ, ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ.ಸಂಜೀವಮೂರ್ತಿ, ಆದಿ ಜಾಂಬವ ಮಹಾಸಭಾ ಅಧ್ಯಕ್ಷ ಮಹರಾಜು, ಬೇಡತ್ತೂರು, ತಿಪ್ಪೇಸ್ವಾಮಿ, ರಂಗನಾಥ್, ಎಸ್.ಸಂಜೀವಯ್ಯ, ಸಿದ್ದಗಂಗಪ್ಪ, ವಕೀಲ ನರಸಿಂಹಮೂರ್ತಿ, ಪೋಸ್ಟ್ ರಾಮಣ್ಣ, ಮರಿಯಪ್ಪ, ಸಾಗರ್, ಕವಣದಾಲ ಶಿವಣ್ಣ, ಹನುಮಂತರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.