
ಮಧುಗಿರಿ: ಜೀತ ವಿಮುಕ್ತರಿಗೆ ಪುನರ್ ವಸತಿ ಕಲ್ಪಿಸಬೇಕೆಂದು ಆಗ್ರಹಿಸಿ ರಾಜ್ಯ ಜೀತದಾಳು ಮತ್ತು ಕೃಷಿ ಕೂಲಿ ಕಾರ್ಮಿಕರ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಗೊಟೋರು ಶಿವಪ್ಪ ಅವರಿಗೆ ಮನವಿ ಸಲ್ಲಿಸಿದರು.
ಜೀವಿಕ ಸಂಘಟನೆಯ ಜಿಲ್ಲಾ ಸಂಚಾಲಕ ಡಾ.ಸಂಜೀವಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ 1,600ಕ್ಕೂ ಹೆಚ್ಚು ಜೀತ ವಿಮುಕ್ತರಿದ್ದು, ಅವರಿಗೆ ಉಚಿತವಾಗಿ ನಿವೇಶನ ಮತ್ತು ಮನೆ ವಿತರಣೆ ಮಾಡಬೇಕು ಎಂದರು.
ಜೀತ ವಿಮುಕ್ತರಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ ಸೌಲಭ್ಯ ನೀಡಬೇಕು. ಜೀತ ವಿಮುಕ್ತ ಕುಟುಂಬದವರಿಗೆ ಉನ್ನತ ಶಿಕ್ಷಣದವರೆಗೂ ಉಚಿತ ಶಿಕ್ಷಣ ನೀಡಬೇಕು. ಸರ್ಕಾರಿ ಕೆಲಸಗಳ ನೇಮಕಾತಿಯಲ್ಲಿ ಮೀಸಲಾತಿ ನೀಡಬೇಕು. ಎಸ್ಇಪಿ ಟಿಎಸ್ಸ್‌ಪಿ ಯೋಜನೆಯಲ್ಲಿ ಆದ್ಯತೆ ನೀಡಬೇಕು. ಸಾಗುವಳಿ ಚೀಟಿ ನೀಡಬೇಕು. ಜಮೀನು ಇರುವ ಪ್ರತಿ ಜೀತ ವಿಮುಕ್ತರಿಗೆ ಕೊಳವೆ ಬಾವಿ ಮಂಜೂರಾತಿ ಮಾಡಲು ಸರ್ಕಾರ ಆದೇಶಿಸಬೇಕೆಂದು ಆಗ್ರಹಿಸಿದರು.
ಜೀವಿಕ ಸಂಘಟನೆಯ ಹನುಮಂತರಾಯಪ್ಪ, ತಾಲ್ಲೂಕು ಸಂಚಾಲಕ ನರಸಿಂಹಮೂರ್ತಿ, ಸರ್ವೋದಯ ಮಾಲಿಂಗ, ನರಸಿಂಹಮೂರ್ತಿ, ವಕೀಲ ಶಿವಕುಮಾರ್, ಡಿ.ಎಸ್.ಎಸ್. ಹರಿರಾಮ್, ಮುಖಂಡ ಕದರಪ್ಪ ತಿಮ್ಮಯ್ಯ, ಗೋವಿಂದಪ್ಪ, ಸಿದ್ದಪ್ಪ, ನರಸಿಂಹಪ್ಪ, ಅಂಜಿನಪ್ಪ, ಪಾಲಣ್ಣ, ಕುಮಾರ, ರಾಜ, ನರಸಿಂಹಪ್ಪ, ಅಂಜಿನಪ್ಪ, ಪಾಲಣ್ಣ, ಶಿವಪ್ಪ, ತೆರಿಯೂರು ನರಸಿಂಹರಾಜು, ನರಸಿಂಹಪ್ಪ, ದೇವರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.