ADVERTISEMENT

ಅಮೆಜಾನ್‌ನಲ್ಲಿ ಆರ್ಡರ್‌ ಮಾಡಿದ್ದು ಮೊಬೈಲ್‌; ಬಂದಿದ್ದು ಸೋಪ್‌!

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 14:06 IST
Last Updated 28 ಮಾರ್ಚ್ 2025, 14:06 IST
ತುರುವೇಕೆರೆಯ ಗ್ರಾಹಕರೊಬ್ಬರಿಗೆ ಮೊಬೈಲ್‌ಗೆ ಬದಲಾಗಿ ಬಂದ ಸೋಪ್‌
ತುರುವೇಕೆರೆಯ ಗ್ರಾಹಕರೊಬ್ಬರಿಗೆ ಮೊಬೈಲ್‌ಗೆ ಬದಲಾಗಿ ಬಂದ ಸೋಪ್‌   

ತುರುವೇಕೆರೆ: ಪಟ್ಟಣದ ಸರಸ್ವತಿಪುರಂನ ಮಹಿಳೆಯೊಬ್ಬರ ಇ–ಕಾಮರ್ಸ್‌ ವೇದಿಕೆಯಾದ ಅಮೆಜಾನ್‌ನಲ್ಲಿ ₹32 ಸಾವಿರ ಮೌಲ್ಯದ ‘ವಿವೊ ವಿ– 50’ ಮೊಬೈಲ್ ಬುಕ್‌ ಮಾಡಿದ್ದರು. ಆದರೆ ಅವರ ಮನೆಗ ತಲುಪಿದ್ದು ಸೋಪುಗಳನ್ನು ತುಂಬಿದ್ದ ಬಾಕ್ಸ್!

ಮಾರ್ಚ್‌ 19ರಂದು ಮಹಿಳೆ ಮೊಬೈಲ್‌ ಬುಕ್ ಮಾಡಿದ್ದರು. 25ರಂದು ಡೆಲಿವರಿ ಬಾಯ್ ಪಾರ್ಸೆಲ್ ತಂದು ಕೊಟ್ಟಿದ್ದಾರೆ. ಆಗ ಮಹಿಳೆ ಡೆಲಿವರಿ ಬಾಯ್‌ ಅವರಿಂದಲೇ ಪಾರ್ಸೆಲ್‌ ಓಪನ್ ಮಾಡಿಸಿದ್ದಾರೆ. ಆ ವೇಳೆ ವಿಡಿಯೊವನ್ನೂ ಚಿತ್ರೀಕರಿಸಿಕೊಂಡಿದ್ದಾರೆ. ವಿವೊ ವಿ– 50 ಎಂಬ ಬಾಕ್ಸ್ ತೆಳುವಾದ ಪ್ಲಾಸ್ಟಿಕ್ ಹಾಳೆಯೊಂದಿಗೆ ಸೀಲ್ ಆಗಿತ್ತು. ಬಿಚ್ಚುತ್ತಾ ಹೋದಂತೆ ಗ್ರಾಹಕರು ಮತ್ತು ಡೆಲಿವರಿ ಬಾಯ್‌ಗೆ ಶಾಕ್ ಕಾದಿತ್ತು. ಆ ಮೊಬೈಲ್ ಬಾಕ್ಸ್‌ನಲ್ಲಿ ಆರು ಸೋಪಿನ ಪ್ಯಾಕೆಟ್‌ಗಳನ್ನು ಕಳುಹಿಸಲಾಗಿತ್ತು. 

ವಿಡಿಯೊ ಮತ್ತು ಫೊಟೊ ಸಹಿತ ಗ್ರಾಹಕರು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಆಗ ಅಮೆಜಾನ್‌ ವ್ಯವಸ್ಥಾಪಕರು, ಈ ಪ್ರಮಾದವನ್ನು ದೊಡ್ಡದು ಮಾಡುವುದು ಬೇಡ. ಕೂಡಲೇ ಹೊಸ ಮೊಬೈಲ್‌ ಕಳಿಸುವ ಭರವಸೆಯನ್ನು ಗ್ರಾಹಕರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.