ADVERTISEMENT

ತುಮಕೂರು | ಗಾಂಜಾ ಮಾರಾಟ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2023, 5:12 IST
Last Updated 7 ನವೆಂಬರ್ 2023, 5:12 IST
<div class="paragraphs"><p>ಬಂಧನ </p></div>

ಬಂಧನ

   

ತುಮಕೂರು: ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ 4 ಕೆ.ಜಿ 330 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಾರದಾದೇವಿ ನಗರದ ಅಮಾನ್ (23), ಶ್ರೀರಾಮ ನಗರದ ಮುದಾಸೀರ್ ಅಹ್ಮದ್ ಷರೀಫ್ (30), ಕೋತಿತೋಪು ಭಾಗ್ಯ ಮಂದಿರದ ಪ್ರಶಾಂತ್ (20), ಪಿ.ಎಚ್.ಕಾಲೊನಿ ಮುಬಾರಕ್ ಪಾಷ (37) ಬಂಧಿತರು.

ADVERTISEMENT

ನಗರದ ಬೆಳಗುಂಬ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸೈಬರ್ ಠಾಣೆಯ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿ, ₹1.20 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಸೈಬರ್‌ ಠಾಣೆಯ ಇನ್‌ಸ್ಪೆಕ್ಟರ್ ಪ್ರಸನ್ನಕುಮಾರ್, ಎಎಸ್ಐ ಮಧುಸೂಧನ್‌, ಸಿಬ್ಬಂದಿ ಸೈಮನ್‌ ವಿಕ್ಟರ್‌, ಶಾಂತಕುಮಾರ್‌, ನಾರಾಯಣ್‌, ಶಿವರಾಂ, ಇನಾಯತ್‌ ಉಲ್ಲಾ ಖಾನ್‌, ದ್ವಾರಕೀಶ್‌, ನಟರಾಜು, ರಘು, ಹರೀಶ್‌, ಶಿವಪ್ರಸಾದ್‌, ಮಾರುತೀಶ್‌, ಚಾಲಕ ಗಿರೀಶ್‌ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.