ADVERTISEMENT

ತುರುವೇಕೆರೆಯಲ್ಲಿ ಗರಿಷ್ಠ 105 ಮಿ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 3 ಮೇ 2019, 4:11 IST
Last Updated 3 ಮೇ 2019, 4:11 IST

ತುಮಕೂರು: ಜಿಲ್ಲೆಯ ವಿವಿಧ ಕಡೆ ಮಂಗಳವಾರ ರಾತ್ರಿ ಮಳೆ ಸುರಿದಿದ್ದು, ಶಿರಾ ಸೇರಿದಂತೆ ವಿವಿಧ ಕಡೆಗಳಲ್ಲಿ ಕೆರೆ, ತೊರೆಗಳಲ್ಲಿ ಅಲ್ಪಸ್ವಲ್ಪ ನೀರು ಬಂದಿದೆ.

ತುರುವೇಕೆರೆ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂದರೆ 105 ಮಿ.ಮೀ ಮಳೆಯಾಗಿದ್ದು, ತುಮಕೂರು ತಾಲ್ಲೂಕಿನಲ್ಲಿ ಗರಿಷ್ಠ 99 ಮಿ ಮೀ ಮಳೆಯಾಗಿದೆ. ಶಿರಾ ತಾಲ್ಲೂಕಿನಲ್ಲಿ ಗರಿಷ್ಠ 86 ಮಿ.ಮೀ ಮಳೆ ಸುರಿದಿದೆ. ತಿಪಟೂರು ತಾಲ್ಲೂಕಿನಲ್ಲಿ ಗಾಳಿ ಮಳೆ ಜೋರಾಗಿತ್ತು. ಅಲ್ಲಿ 44 ಮಿ.ಮೀ ಮಳೆ ಬಿದ್ದಿದೆ.

ಇನ್ನು ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ ಮತ್ತು ಪಾವಗಡ ತಾಲ್ಲೂಕುಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ.

ADVERTISEMENT

ಬಾಳೆ, ತೆಂಗು, ತೋಟಗಾರಿಕೆ ಬೆಳೆಗಳಿಗೂ ಹಾನಿಯಾಗಿದ್ದು ಪರಿಹಾರಕ್ಕಾಗಿ ಸರ್ಕಾರಕ್ಕೆ ರೈತರು ಮೊರೆ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.