ತುಮಕೂರು: ನಗರದ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಜುಲೈ 2ರಿಂದ ಮಧ್ಯಾಹ್ನದ ಬಿಸಿಯೂಟ ಸಿಗಲಿದೆ.
ವಿ.ವಿ ಕಲಾ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಂತರ ಇದೀಗ ಎಂಪ್ರೆಸ್ ಕಾಲೇಜಿಗೂ ಬಿಸಿಯೂಟ ಕಾರ್ಯಕ್ರಮ ವಿಸ್ತರಿಸಲಾಗಿದೆ.
ಕಲ್ಪಾಮೃತ ಟ್ರಸ್ಟ್, ರಾಮಕೃಷ್ಣ ಸೇವಾಶ್ರಮ, ಅಮೃತ ಆಹಾರದ ವತಿಯಿಂದ ‘ಪೌಷ್ಟಿಕಾಮೃತ’ ಯೋಜನೆಯಡಿ ಎಂಪ್ರೆಸ್ ಕಾಲೇಜಿನ ಒಂದು ಸಾವಿರ ವಿದ್ಯಾರ್ಥಿನಿಯರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ ಇಲ್ಲಿ ಸೋಮವಾರ ಹೇಳಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಬೆಳಗಿನ ಉಪಾಹಾರ ಸೇವಿಸದೆ ಕಾಲೇಜಿಗೆ ಬರುತ್ತಿದ್ದಾರೆ. ಇದರಿಂದ ಅಪೌಷ್ಟಿಕತೆಗೆ ತುತ್ತಾಗುತ್ತಾರೆ. ಇದು ಶೈಕ್ಷಣಿಕ ಪ್ರಗತಿಯ ಮೇಲೂ ಪರಿಣಾಮ ಬೀರುತ್ತದೆ. ಇದನ್ನು ಅರಿತು ಬಿಸಿಯೂಟ ನೀಡಲಾಗುತ್ತದೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿತರಣಾ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ಕಲ್ಪಾಮೃತ ಟ್ರಸ್ಟ್ ಅಧ್ಯಕ್ಷ ಟಿ.ಎನ್.ಮಧುಕರ್, ಉಪಾಧ್ಯಕ್ಷೆ ಅಂಬಿಕಾ, ಕಾರ್ಯದರ್ಶಿ ಬಿ.ಆರ್.ಉಮೇಶ್, ಖಜಾಂಚಿ ಸ್ಫೂರ್ತಿ ಚಿದಾನಂದ್, ಟಸ್ಟ್ರಿ ಬಿ.ಎನ್.ಪ್ರಶಾಂತ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.