ADVERTISEMENT

ತಿಪಟೂರು: ಪಾಲಿಟಿಕ್ನಿಕ್ ಕಾಲೇಜಿಗೆ ಸಚಿವ ವೆಂಕಟೇಶ್ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಮೇ 2025, 15:16 IST
Last Updated 19 ಮೇ 2025, 15:16 IST
ಕೊನೇಹಳ್ಳಿಯ ಪಶುಸಂಗೋಪನಾ ಪಾಲಿಟಿಕ್ನಿಕ್ ಕಾಲೇಜಿಗೆ ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಭೇಟಿ ನೀಡಿದರು
ಕೊನೇಹಳ್ಳಿಯ ಪಶುಸಂಗೋಪನಾ ಪಾಲಿಟಿಕ್ನಿಕ್ ಕಾಲೇಜಿಗೆ ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಭೇಟಿ ನೀಡಿದರು   

ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಕೊನೇಹಳ್ಳಿಯ ಪಶುಸಂಗೋಪನಾ ಇಲಾಖೆಯಿಂದ ನಡೆಯುತ್ತಿರುವ ಪಾಲಿಟಿಕ್ನಿಕ್ ಕಾಲೇಜಿಗೆ ಹಾಗೂ ಅಮೃತ್ ಮಹಲ್ ಜಾನುವಾರುಗಳ ಸಂಶೋಧನಾ ಕೇಂದ್ರಕ್ಕೆ ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಸೋಮವಾರ ಭೇಟಿ ನೀಡಿದರು.

ಪಾಲಿಟಿಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳನ್ನು ಅನ್ಯ ಕೆಲಸದ ಭಾರ ಹಾಗೂ ಹುಣಸೆ ಕೀಳಲು ವಿದ್ಯಾರ್ಥಿಗಳ ಬಳಕೆ ಎಂಬ ಶೀರ್ಷಿಕೆಯಡಿ ಮಾರ್ಚ್‌ 12 ರಂದು ಪ್ರಜಾವಾಣಿಯಲ್ಲಿ ವರದಿ ಪ್ರಕಟವಾಗಿತ್ತು.

ಸಚಿವ ಕೆ.ವೆಂಕಟೇಶ್ ಭೇಟಿನೀಡಿ ಮಕ್ಕಳ ಹಾಗೂ ಕಾಲೇಜಿನ ಆಡಳಿತ ವೈಖರಿ ಬಗ್ಗೆ ಚರ್ಚಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಚರ್ಚಿಸಲಾಗುವುದು. ಅಮೃತ್ ಮಹಲ್ ಜಾನುವಾರುಗಳ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ತಳಿಗಳ ಅಭಿವೃದ್ಧಿಗೆ ಉತ್ತೇಜನ ನೀಡಲಾಗುವುದು ಎಂದರು.

ADVERTISEMENT

ಪಶುಸಂಗೋಪನೆ ಇಲಾಖೆ ನಿರ್ದೇಶಕ ಡಾ.ಮಂಜುನಾಥ್ ಪಾಳೇಗಾರ್, ಬೆಂಗಳೂರು ವಿಭಾಗದ ಉಪನಿರ್ದೆಶಕ ರೂಪ, ಹಾಸನ ಪಶುಸಂಗೋಪನೆ ನಿರ್ದೇಶಕ ಡಾ.ರಮೇಶ್, ತಾಲ್ಲೂಕಿನ ಸಹಾಯಕ ನಿರ್ದೇಶಕ ಡಾ.ನಂದೀಶ್, ಅಮೃತ್ ಮಹಲ್ ಜಾನುವಾರುಗಳ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನವೀನಕುಮಾರ.ಬಿ.ಟಿ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ರುದ್ರಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.