ADVERTISEMENT

ಮಾಸ್ಕ್‌ ಇಲ್ಲದಿದ್ದರೆ ಪೆಟ್ರೋಲ್ ಸಿಗಲ್ಲ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 14:31 IST
Last Updated 30 ಮಾರ್ಚ್ 2020, 14:31 IST
   

ತುಮಕೂರು: ಜಿಲ್ಲೆಯ ಹಲವೆಡೆ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಹಲವು ಅಂಗಡಿ, ಬ್ಯಾಂಕ್, ಪೆಟ್ರೋಲ್‌ ಬಂಕ್‌ ಮತ್ತಿತರೆ ಕಡೆಗಳಲ್ಲಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಬಹುತೇಕ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಲು ಬರುವ ಗ್ರಾಹಕರಿಗಾಗಿ ಅಂತರ ಕಾಯ್ದುಕೊಳ್ಳಲು ಬಾಕ್ಸ್‌ಗಳನ್ನು ನಿರ್ಮಿಸಲಾಗಿದೆ. ಬ್ಯಾಂಕ್‌, ಮೆಡಿಕಲ್ ಸ್ಟೋರ್, ನಂದಿನಿ ಹಾಲಿನ ಬೂತ್‌ಗಳಲ್ಲಿ ದಾರಗಳನ್ನು ಅಡ್ಡಲಾಗಿ ಕಟ್ಟಲಾಗಿದೆ.

ಇದೀಗ ಪೆಟ್ರೋಲ್‌ ಬಂಕ್‌ಗಳಲ್ಲಿ ಮಾಸ್ಕ್‌ ಧರಿಸದೇ ಬರುವ ವಾಹನ ಸವಾರರಿಗೆ ಪೆಟ್ರೋಲ್‌, ಡೀಸೆಲ್‌ ಹಾಕುವುದಿಲ್ಲ ಎನ್ನುವ ಫಲಕಗಳು ಗಮನ ಸೆಳೆಯುತ್ತಿವೆ. ಇನ್ನೂ ಕೆಲವೆಡೆ ಸಾರ್ವಜನಿಕರು ತಮ್ಮ ಮನೆಗಳಿಗೆ ಯಾರು ಬರದಂತೆ ನಿರ್ಬಂಧ ಹಾಕಿಕೊಂಡಿದ್ದಾರೆ. ಕೆಲವೆಡೆ ತಮ್ಮ ಮನೆಗಳ ಮುಂದೆ ‘ನಾಳೆ ಬನ್ನಿ’ ಎನ್ನುವ ಭಿತ್ತಿಪತ್ರ ಅಂಟಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.