ADVERTISEMENT

ಹಿಂಸೆಯಿಂದ ಏನನ್ನೂ ಸಾಧಿಸಲಾಗದು: ನೀನಾಸಂ ಸತೀಶ್‌

ನಟ ನೀನಾಸಂ ಸತೀಶ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 2:23 IST
Last Updated 2 ಆಗಸ್ಟ್ 2021, 2:23 IST
ತಿಪಟೂರಿನಲ್ಲಿ ಜನಸ್ಪಂದನ ಟ್ರಸ್ಟ್‌ನಿಂದ ಕೋವಿಡ್‌ ವಾರಿಯರ್ಸ್‌ಗಳನ್ನು ಅಭಿನಂದಿಸಲಾಯಿತು. ನಟ ನೀನಾಸಂ ಸತೀಶ್‌ ಇದ್ದರು
ತಿಪಟೂರಿನಲ್ಲಿ ಜನಸ್ಪಂದನ ಟ್ರಸ್ಟ್‌ನಿಂದ ಕೋವಿಡ್‌ ವಾರಿಯರ್ಸ್‌ಗಳನ್ನು ಅಭಿನಂದಿಸಲಾಯಿತು. ನಟ ನೀನಾಸಂ ಸತೀಶ್‌ ಇದ್ದರು   

ತಿಪಟೂರು: ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಶಾಂತಿ, ತಾಳ್ಮೆ, ಅಹಿಂಸೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರೂ ಒಟ್ಟಾಗಿ ನಡೆದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ನಟ ನೀನಾಸಂ ಸತೀಶ್‌ ಹೇಳಿದರು.

ನಗರದ ರೋಟರಿ ಭವನದಲ್ಲಿ ಭಾನುವಾರ ಜನಸ್ಪಂದನ ಟ್ರಸ್ಟ್‌ನಿಂದ ಆಯೋಜಿಸಿದ್ದ ಕೋವಿಡ್‌ ವಾರಿಯರ್ಸ್‍ಗಳಿಗೆ ಅಭಿನಂದನಾ ಪತ್ರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಜಾತೀಯತೆ ಸಮಸ್ಯೆ ಹೆಚ್ಚುತ್ತಿದೆ. ಇದು ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತಿದೆ. ಅಂತಹ ವಿಚಾರಗಳನ್ನು ಎಲ್ಲರ ಮನಸ್ಸಿನಿಂದ ತೊಡೆದು ಹಾಕಿ ಎಲ್ಲರೂ ಒಂದಾಗಿ ಬದುಕುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಕೋವಿಡ್‌ ಲಾಕ್‍ಡೌನ್ ಸಂದರ್ಭದಲ್ಲಿ ಟ್ರಸ್ಟ್‌ ಮೂಲಕ, ಅನೇಕರು ಹಲವು ಬಗೆಯ ಸಹಕಾರ ನೀಡಿದ್ದು ಹೆಮ್ಮೆಯ ಸಂಗತಿ. ಮುಂದಿನ ಪೀಳಿಗೆಗೆ ಉತ್ತಮ ವಿಚಾರಗಳನ್ನು ಸಮಾಜದ ಮೂಲಕ ನೀಡುವ ಪ್ರಜ್ಞಾವಂತಿಕೆ ಬೆಳೆಸಬೇಕಿದೆ ಎಂದು ಹೇಳಿದರು.

ADVERTISEMENT

ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ ಮಾತನಾಡಿ, ಸಮಾಜದಲ್ಲಿ ಅನೇಕ ಬದಲಾವಣೆ ತರುವ ಉದ್ದೇಶದಿಂದಲೇ ಟ್ರಸ್ಟ್ ಪ್ರಾರಂಭಿಸಿದ್ದು, ಅನೇಕರ ಸಹಕಾರದಿಂದ ಜನಪರ ಕಾರ್ಯಕ್ರಮ ಮಾಡಿದ್ದೇವೆ ಎಂದು ಹೇಳಿದರು.

ಡಾ.ಸುಧಾ ಮಾತನಾಡಿ, ಕೋವಿಡ್‌ ವಾರಿಯರ್ಸ್‍ಗಳನ್ನು ಗೌರವಿಸುವುದು ಉತ್ತಮ ಕಾರ್ಯ. ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಇತರರನ್ನು ರಕ್ಷಿಸುವ ಮನಸ್ಥಿತಿ ಎಲ್ಲರಲ್ಲಿಯೂ ಬರಲು ಸಾಧ್ಯ
ವಿಲ್ಲ. ಅಂತಹವರನ್ನು ಗುರುತಿಸುವ ಕಾರ್ಯ ಶ್ಲಾಘನೀಯ ಎಂದರು.

ಚಿತ್ರ ಸಂಭಾಷಣೆಕಾರ ಮಾಸ್ತಿ ಮಾತನಾಡಿ, ಸೇವೆ ಮತ್ತು ಸಹಾಯ ಎಂತಹ ಸಾಧನೆಗೂ ಮೀರಿದ್ದಾಗಿದೆ. ಸಾಧನೆ ಒಬ್ಬರದಾಗುತ್ತದೆ ಆದರೆ ಸೇವೆ, ಸಹಾಯ ಹಲವರು ಸೇರಿ ಆಗುವಂತಹದ್ದು. ಸೇವೆಗೆ ಯಾವುದೇ ಜಾತಿ, ಮತ, ಪಂಥದ ಬೇಧವಿಲ್ಲ ಎಂದು ಹೇಳಿದರು.

123 ಕೋವಿಡ್‌ ವಾರಿಯರ್ಸ್‍ಗಳಿಗೆ ಬೆಳ್ಳಿ ಪದಕದ ಜೊತೆಗೆ ಅಭಿನಂದನಾ ಪತ್ರ ನೀಡಲಾಯಿತು. ಡಾ.ಅನಿಲ್, ಜಿ.ಪಂ. ಮಾಜಿ ಸದಸ್ಯ ತ್ರಿಯಂಬಕ, ಷಫಿವುಲ್ಲಾ ಷರೀಫ್, ಸೈಫುಲ್ಲಾ, ಎಂ.ಬಿ.ಪರಮಶಿವಯ್ಯ, ಆಲ್ಬೂರು ಮಹಲಿಂಗಪ್ಪ, ಕುಪ್ಪಾಳು ರಂಗಸ್ವಾಮಿ, ದಿಲಾವರ್ ರಾಮದುರ್ಗ, ವಿಷ್ಣು, ಶ್ರೀಕಾಂತ್, ಮನೋಹರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.