ADVERTISEMENT

ಶುಶ್ರೂಷಕರ ಸೇವೆ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 13 ಮೇ 2025, 7:01 IST
Last Updated 13 ಮೇ 2025, 7:01 IST
ತುಮಕೂರಿನಲ್ಲಿ ಸೋಮವಾರ ಶ್ರೀದೇವಿ ಶಿಕ್ಷಣ ಸಂಸ್ಥೆಯಿಂದ ಅಂತರರಾಷ್ಟ್ರೀಯ ಶುಶ್ರೂಷಕರ ದಿನ ಆಚರಿಸಲಾಯಿತು. ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್‌, ಪ್ರಾಂಶುಪಾಲರಾದ ಪ್ರೊ.ಎಸ್‌.ಉಷಾ, ಪ್ರೊ.ಆರ್.ಕೆ.ಮುನಿಸ್ವಾಮಿ, ಪ್ರೊ.ಅಂಬಾ ಇತರರು ಹಾಜರಿದ್ದರು

ತುಮಕೂರು: ವಿದ್ಯಾರ್ಥಿಗಳು ಶುಶ್ರೂಷಕರಾಗಲು ಬೇಕಾದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಕಾಲೇಜಿನಲ್ಲಿ ಸಿಗುವ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶ್ರೀದೇವಿ ಸಂಸ್ಥೆ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್‌ ಸಲಹೆ ಮಾಡಿದರು.

ನಗರದಲ್ಲಿ ಸೋಮವಾರ ಶ್ರೀದೇವಿ ನರ್ಸಿಂಗ್‌ ಕಾಲೇಜು, ರಮಣ ಮಹರ್ಷಿ ನರ್ಸಿಂಗ್‌ ಕಾಲೇಜು, ದುರ್ಗಾಂಬಾ ಸ್ಕೂಲ್‌ ಆಫ್‌ ನರ್ಸಿಂಗ್‌ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಶುಶ್ರೂಷಕರ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ಆಸ್ಪತ್ರೆಯ ನರ್ಸಿಂಗ್‌ ಅಧೀಕ್ಷಕಿ ಗಾಯತ್ರಿ, ‘ಹೆಚ್ಚಿನ ಪ್ರಮಾಣದಲ್ಲಿ ಕೌಶಲ ಅಳವಡಿಸಿಕೊಂಡರೆ ವೈದ್ಯಕೀಯ ವೃತ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸಬಹುದು. ಹೆಸರು ಗಳಿಸುವುದರ ಜತೆಗೆ ಮಾನವೀಯ ಸೇವೆಯನ್ನು ಸಮಾಜ ಗುರುತಿಸುತ್ತದೆ’ ಎಂದರು.

ADVERTISEMENT

ಪ್ರಾಂಶುಪಾಲರಾದ ಪ್ರೊ.ಎಸ್‌.ಉಷಾ, ಪ್ರೊ.ಆರ್.ಕೆ.ಮುನಿಸ್ವಾಮಿ, ಪ್ರೊ.ಅಂಬಾ, ಜಿಲ್ಲಾ ಆಸ್ಪತ್ರೆಯ ಶಾಂತಾ, ನರ್ಸಿಂಗ್ ಕಾಲೇಜಿನ ಡಾ.ಟಿ.ಎಸ್.ಭೀಮರಾಜು, ಪ್ರೊ.ಟಿ.ವಿ.ರೇವಣ್ಣ, ಪ್ರೊ.ನಾರಾಯಣ್‌ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.