ADVERTISEMENT

ತಿಪಟೂರು| ಟ್ಯಾಂಕರ್ ಪಲ್ಟಿ: ರಸ್ತೆಯಲ್ಲಿ ಹರಿದ ಡೀಸೆಲ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 8:34 IST
Last Updated 16 ಜನವರಿ 2024, 8:34 IST
   

ತಿಪಟೂರು: ಚಾಲಕನ ನಿಯಂತ್ರಣ ತಪ್ಪಿದ ಡೀಸೆಲ್ ಸಾಗಣೆ ಟ್ಯಾಂಕರ್ ಲಾರಿ ಉರುಳಿ ಬಿದಿದ್ದು, ನೂರಾರು ಲೀಟರ್ ಡೀಸೆಲ್ ರಸ್ತೆ ಮೇಲೆ ಹರಿದಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಿಪಟೂರು– ಹುಳಿಯಾರು ರಸ್ತೆಯ ಹರಿ ಸಮುದ್ರ ಗೇಟ್ ಸಮೀಪ ಮಂಗಳವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಉರುಳಿದ ಟ್ಯಾಂಕರ್‌ನಿಂದ ಕೆಲ ಸ್ಥಳೀಯರು ಡೀಸೆಲ್ ತುಂಬಿಸಿಕೊಳ್ಳಲು ಯತ್ನಿಸಿದ್ದು ಸ್ಥಳಕ್ಕೆ ಬಂದ ಪೊಲೀಸರು ತಡೆದಿದ್ದಾರೆ.

ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದಿದ್ದು, ನಿಗಾವಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.