ADVERTISEMENT

ರಸ್ತೆ, ಚರಂಡಿಯಿಂದ ಉದ್ಧಾರ ಸಾಧ್ಯವೇ?: ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 12:25 IST
Last Updated 13 ಡಿಸೆಂಬರ್ 2025, 12:25 IST
<div class="paragraphs"><p>ಜಿ. ಪರಮೇಶ್ವರ</p></div>

ಜಿ. ಪರಮೇಶ್ವರ

   

ತುಮಕೂರು: ಹಳ್ಳಿಯಲ್ಲಿ ಕೂಲಿ ಮಾಡುವ ಮಹಿಳೆಯರ ಬದುಕು ಸುಧಾರಣೆಗೆ ಪ್ರತಿ ತಿಂಗಳು ₹2 ಸಾವಿರ ನೀಡಲಾಗುತ್ತಿದೆ. ಗ್ಯಾರಂಟಿ ಕೊಡದಿದ್ದರೆ ಜನ ಏನಾಗಬೇಕು? ರಸ್ತೆ, ಚರಂಡಿ, ಇತರೆ ಕಾರ್ಯಕ್ರಮಗಳಿಂದ ಜನರ ಜೀವನ ಉದ್ಧಾರ ಆಗುತ್ತದೆಯೇ? ಎಂದು ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಬಂಜಾರ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

ನಮ್ಮ ಸರ್ಕಾರದಲ್ಲಿ ರಸ್ತೆ, ಚರಂಡಿ, ನೀರಾವರಿ ಯೋಜನೆ, ಮನೆ ನಿರ್ಮಾಣ, ಇತರೆ ಅಭಿವೃದ್ಧಿ ಕಾರ್ಯ ನಿಲ್ಲಿಸಿಲ್ಲ. ಕೆಲಸಗಳು ಒಂದಷ್ಟು ನಿಧಾನ ಆಗಿರಬಹುದು ಎಂದು ಸ್ಪಷ್ಟಪಡಿಸಿದರು.

ಸಾವಿರಾರು ವರ್ಷಗಳಿಂದ ನಡೆಯುತ್ತಿರುವ ಶೋಷಣೆ ಮುಂದುವರಿಯಬಾರದು ಎಂಬ ಕಾರಣಕ್ಕೆ ಗ್ಯಾರಂಟಿ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಐದು ಯೋಜನೆಗಳಿಗೆ ವರ್ಷಕ್ಕೆ ₹58 ಸಾವಿರ ಕೋಟಿ ನೀಡಲಾಗುತ್ತಿದೆ. ಇಷ್ಟು ಹಣ ಕೊಡುವುದು ನಿಲ್ಲಿಸಿದರೆ ಜನರು ಬದುಕು ಏನಾಗಬೇಕು ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.