ಪ್ರಜಾವಾಣಿ ವಾರ್ತೆ
ಪಾವಗಡ: ತಾಲ್ಲೂಕಿನ ಪೋಲೇನಹಳ್ಳಿ ಗ್ರಾಮದಲ್ಲಿ ಭಾನುವಾರ ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನರಾಂ ಜಯಂತಿ ಪ್ರಯುಕ್ತ ಅಂಬೇಡ್ಕರ್, ಬಾಬು ಜಗಜೀವನರಾಂ ಭಾವಚಿತ್ರವನ್ನು ಸಾರೋಟಿನಲ್ಲಿರಿಸಿ ಕಲಾ ತಂಡಗಳು, ವಾದ್ಯಗೋಷ್ಠಿಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.
ತಾಲ್ಲೂಕಿನ ಲಿಂಗದಹಳ್ಳಿಯಿಂದ ಪೋಲೇನಹಳ್ಳಿ ಗ್ರಾಮದವರೆಗೆ ನಡೆದ ಮೆರವಣಿಗೆಯಲ್ಲಿ ಯುವಕರು, ಗ್ರಾಮಸ್ಥರು ಭಾಗವಹಿಸಿದ್ದರು.
ವಕೀಲ ಹರಿರಾಂ ಮಾತನಾಡಿ, ಶಿಕ್ಷಣ, ಸಮಾನತೆಯಿಂದ ಉತ್ತಮ ಸಾಧನೆ ಸಾಧ್ಯ ಎಂದು ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ. ಯುವ ಜನತೆ ಅಂಬೇಡ್ಕರ್ ಅವರ ಸಾಧನೆ, ಜೀವನ ಶೈಲಿಯನ್ನು ಮಾದರಿಯಾಗಿಟ್ಟುಕೊಂಡು ಸಾಧನೆಯತ್ತ ಸಾಗಬೇಕು ಎಂದರು.
ಜಾತಿ, ಲಿಂಗ, ಧರ್ಮದ ತಾರತಮ್ಯವಿಲ್ಲದೆ ವಯಸ್ಸಿನ ಆಧಾರದಲ್ಲಿ ಮತದಾನದ ಹಕ್ಕನ್ನು ಪ್ರತಿಯೊಬ್ಬರಿಗೂ ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿದ್ದಾರೆ. ಜೀವಮಾನವನ್ನು ರಾಷ್ಟ್ರ ಸಂವಿಧಾನಕ್ಕಾಗಿ ಮುಡುಪಾಗಿಟ್ಟಿದ್ದರು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ, ಈಗಲೂ ಅಸ್ಪೃಷ್ಯತೆ ಜೀವಂತವಾಗಿದೆ. ಅಸ್ಪೃಷ್ಯತೆಯನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ನಾಗರಿಕ ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಅಂಬೇಡ್ಕರ್ ಅವರ ತತ್ವ ಪ್ರಾಯೋಗಿಕವಾಗಿ ಅನುಷ್ಠಾನವಾಗಬೇಕು ಎಂದರು.
ಶಿಕ್ಷಕ ಲಕ್ಷ್ಮಣಮೂರ್ತಿ ಮಾತನಾಡಿ, ಸಂವಿಧಾನ ರಾಷ್ಟ್ರದ ಜನತೆಗೆ ಆಸ್ತಿ. ಭಾರತ ಸಂವಿಧಾನಕ್ಕೆ ತನ್ನದೇ ವೈಶಿಷ್ಟ್ಯ ಇದೆ ಎಂದರು.
ವಕೀಲ ಟಿ.ಎನ್. ಪೇಟೆ ರಮೇಶ್, ಎಂ.ಕೆ. ನಾರಾಯಣಪ್ಪ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಸಿ.ಕೆ. ತಿಪ್ಪೇಸ್ವಾಮಿ, ಕೋರ್ಟ್ ನರಸಪ್ಪ, ವಕೀಲೆ ಭೀಮಾ ಪುತ್ರಿ ಸಾವಿತ್ರಿ, ವಕೀಲ ನಾಗರಾಜು, ಕೃಷ್ಣಮೂರ್ತಿ, ಎಲ್ಲೇಂದ್ರಬಾಬು, ವಳ್ಳೂರು ನಾಗೇಶ್, ಕೇಂಚರಾಯ, ವೆಂಕಟರಮಣ, ಗ್ರಾಮ ಪಂಚಾಯಿತಿ ಸದಸ್ಯ ಟಿ.ಎಲ್. ನಿರಂಜನರೆಡ್ಡಿ, ಅನ್ನಪೂರ್ಣಮ್ಮ, ಮಹೇಶ್, ನಾಗೇಂದ್ರಯ್ಯ, ಓಂಕಾರ್, ಪಿ.ಎನ್. ಶಾಂತಕುಮಾರ್, ರಾಮಾಂಜಿನೇಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.