ADVERTISEMENT

ಪಾವಗಡ: ಕೋಣನಕುರಿಕೆ ರಸ್ತೆ ಮುಚ್ಚಿರುವುದನ್ನು ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 7:55 IST
Last Updated 17 ಜನವರಿ 2026, 7:55 IST
ಪಾವಗಡ ತಾಲ್ಲೂಕು ದೇವರಬೆಟ್ಟದಿಂದ ಕೋಣನಕುರಿಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಚ್ಚಿರುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಪಾವಗಡ ತಾಲ್ಲೂಕು ದೇವರಬೆಟ್ಟದಿಂದ ಕೋಣನಕುರಿಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಚ್ಚಿರುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು   

ಪಾವಗಡ: ದೇವರಬೆಟ್ಟದಿಂದ ಕೋಣನಕುರಿಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಚ್ಚಿರುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ಕೆಲವರು ಮುಚ್ಚಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸುತ್ತಿ ಬಳಸಿ ಗ್ರಾಮಕ್ಕೆ ಹೋಗಬೇಕಿದೆ ಎಂದು ಆರೋಪಿಸಿದರು.

ರಸ್ತೆಯ ಮಧ್ಯ ಭಾಗಕ್ಕೆ ಬೇಲಿ, ಮಣ್ಣನ್ನು ಸುರಿದು ವಾಹನಗಳು ಓಡಾಡದಂತೆ ಅಡ್ಡ ಹಾಕಲಾಗಿದೆ. ಪಟ್ಟಣ ಸೇರಿದಂತೆ ವಿವಿಧೆಡೆ ಪ್ರಯಾಣಿಸುವ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಸಂಚಾರ ಮಾಡಲು ಅನುವು ಮಾಡಿಕೊಡುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದರು.

ADVERTISEMENT

ಕರ್ನಾಟಕ ಕಾಡುಗೊಲ್ಲ ಪರಿಷತ್ ಸಂಘಟನೆ ತಾಲ್ಲೂಕು ಅಧ್ಯಕ್ಷ ಜಿ ನರಸಿಂಹರಾಜ ಮಾತನಾಡಿ, ಹಲವು ವರ್ಷಗಳಿಂದ ಇದೇ ರಸ್ತೆಯಲ್ಲಿ ಗ್ರಾಮಸ್ಥರು ಓಡಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ರಸ್ತೆ ಇಲ್ಲದಂತಾಗಿದೆ. ತಾಲ್ಲೂಕು ಆಡಳಿತ, ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.