ADVERTISEMENT

ಕುಣಿಗಲ್| ಹುಲಿಯೂರುದುರ್ಗದ ಒಡೇ ಭೈರವೇಶ್ವರ ಸ್ವಾಮಿ ಜಾತ್ರೆಯಲ್ಲಿ ಮದ್ಯ ಸಮಾರಾಧನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 14:03 IST
Last Updated 17 ಜನವರಿ 2023, 14:03 IST
   

ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಅರಮನೆ ಹೊನ್ನಮಾಚನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಒಡೇ ಭೈರವೇಶ್ವರ ಸ್ವಾಮಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ತೀರ್ಥ ರೂಪದಲ್ಲಿ ಸಾಮೂಹಿಕವಾಗಿ ಮದ್ಯ ಸೇವಿಸಿ, ಕುಣಿದು ಕುಪ್ಪಳಿಸಿದರು.

ಒಡೇ ಭೈರವೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ದೇವರಿಗೆ ಮದ್ಯ ನೈವೇದ್ಯ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಅದರಂತೆ ಈ ಬಾರಿಯೂ ಮದ್ಯ ನೈವೇದ್ಯ ಮಾಡಲಾಗಿತ್ತು. ದೇವರಲ್ಲಿ ಹರಕೆ ಹೊತ್ತವರು, ಒಡೇ ಭೈರವೇಶ್ವರನ ಒಕ್ಕಲುಗಳು ಸಾವಿರಾರು ಲೀಟರ್‌ ಮದ್ಯ ಸಂಗ್ರಹಿಸಿ ಹಂಚಿದರು. ಹುಡುಗರು, ವಯಸ್ಕರು, ಮಹಿಳೆಯರು ಸೇರಿದಂತೆ ಎಲ್ಲರು ಮದ್ಯ ಸೇವಿಸಿ, ದೇವರಿಗೆ ನಮಿಸಿದರು.

ಜಾತ್ರೆಯ ಕೊನೆಯ ಭಾಗವಾಗಿ ಡ್ರಮ್‌ನಲ್ಲಿ ಮದ್ಯ ಸಂಗ್ರಹಿಸಿ, ಎಲ್ಲರಿಗೂ ಹಂಚಿಕೆ ಮಾಡಲಾಯಿತು. ಮದ್ಯದ ಜೊತೆಗೆ ಮಾಂಸ, ಕಡ್ಲೆಪುರಿ ವ್ಯವಸ್ಥೆ ಮಾಡಲಾಗಿತ್ತು. ಅರಮನೆ ಹೊನ್ನಮಾಚನಹಳ್ಳಿ ಸಿದ್ಧರನಾಡು ಎಂದೇ ಪ್ರಸಿದ್ಧಿ ಪಡೆದಿದ್ದು, ಭಂಗಿ ಸೇದಲು ಸೊಪ್ಪು ನೀಡಲಾಗುತ್ತಿದ್ದು, ಈ ಬಾರಿಯೂ ಅದರ ಆಚರಣೆ ನಡೆಯಿತು. ಸಂತೃಪ್ತರಾದ ಭಕ್ತರು ಸಂಜೆ ವೇಳೆಗೆ ತಮ್ಮ ಊರುಗಳತ್ತ ತೆರಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.