ADVERTISEMENT

ಅನಧಿಕೃತ ಗ್ಯಾಸ್ ರೀಫಿಲಿಂಗ್ ಘಟಕದ ಮೇಲೆ ದಾಳಿ: 269 ಸಿಲೆಂಡರ್‌ಗಳು ವಶ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 13:17 IST
Last Updated 1 ಆಗಸ್ಟ್ 2023, 13:17 IST
ಕುಣಿಗಲ್ ತಾಲ್ಲೂಕು ಬೋರಲಿಂಗಯ್ಯಪಾಳ್ಯದಲ್ಲಿ ಅನಧಿಕೃತ ಗ್ಯಾಸ್ ರೀ ಫಿಲ್ಲಿಂಗ್ ಘಟಕದ ಮೇಲೆ ಕುಣಿಗಲ್ ಪೊಲೀಸರು ದಾಳಿ ನಡೆಸಿ 269 ಸಿಲಿಂಡರ್ ವಶಪಡಿಸಿಕೊಂಡಿದ್ದಾರೆ
ಕುಣಿಗಲ್ ತಾಲ್ಲೂಕು ಬೋರಲಿಂಗಯ್ಯಪಾಳ್ಯದಲ್ಲಿ ಅನಧಿಕೃತ ಗ್ಯಾಸ್ ರೀ ಫಿಲ್ಲಿಂಗ್ ಘಟಕದ ಮೇಲೆ ಕುಣಿಗಲ್ ಪೊಲೀಸರು ದಾಳಿ ನಡೆಸಿ 269 ಸಿಲಿಂಡರ್ ವಶಪಡಿಸಿಕೊಂಡಿದ್ದಾರೆ   

ಕುಣಿಗಲ್: ತಾಲ್ಲೂಕಿನ ಬೋರಲಿಂಗಯ್ಯಪಾಳ್ಯದ ಶೆಡ್ ಒಂದರಲ್ಲಿ ನಡೆಸಲಾಗುತ್ತಿದ್ದ ಅನಧಿಕೃತ ಗ್ಯಾಸ್ ರೀ ಫಿಲ್ಲಿಂಗ್ ಘಟಕದ ಮೇಲೆ ದಾಳಿ ನಡೆಸಿದ ಕುಣಿಗಲ್ ಪೊಲೀಸರು 269 ಸಿಲಿಂಡರ್, ರೀ ಫಿಲ್ಲಿಂಗ್ ಸಾಮಾಗ್ರಿ ಮತ್ತು ವಾಹನ ವಶಪಡಿಸಿಕೊಂಡಿದ್ದಾರೆ.

ಕಸಬ ಹೋಬಳಿಯ ಬೋರಲಿಂಗಯ್ಯಪಾಳ್ಯದ ನೇರಳೆಮರದಮ್ಮ ದೇವಾಲಯದ ಸಮೀಪದ ಶೆಡ್‌ನಲ್ಲಿ ಬೋರಲಿಂಗಯ್ಯನ ಪಾಳ್ಯದ ಕುಮಾರ್ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಡಿವೈಎಸ್ಪಿ ಲಕ್ಷ್ಮಿಕಾಂತ್ ಮಾರ್ಗದರ್ಶನದಲ್ಲಿ ಸಿಪಿಐ ಗುರುಪ್ರಸಾದ್‌ ಮತ್ತು ಸಿಬ್ಬಂದಿ ದಾಳಿ ನಡೆಸಿ 269 ಸಿಲಿಂಡರ್ ವಶಪಡಿಸಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಕುಮಾರ್ ಪರಾರಿಯಾಗಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT