ADVERTISEMENT

ತುಮಕೂರು | ತುರ್ತು ನಿರ್ವಹಣಾ ಕಾಮಗಾರಿ: ಎರಡು ದಿನ ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:31 IST
Last Updated 25 ಡಿಸೆಂಬರ್ 2025, 7:31 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಬೆಸ್ಕಾಂ ಗ್ರಾಮೀಣ ಉಪ ವಿಭಾಗದ ವ್ಯಾಪ್ತಿಯಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿದ್ದು, ಡಿ.27 ಮತ್ತು 28ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಸ್ಥಳಗಳು (27ರಂದು): ಬಿದರೆ, ದೊಡ್ಡಗುಣಿ, ಕಡಬ, ಕಲ್ಲೂರು, ಕೆ.ಜೆ.ಟೆಂಪಲ್, ಉಂಗ್ರಾ, ಸೋಮಲಾಪುರ, ಹೊನ್ನುಡಿಕೆ, ಹಿರೇಹಳ್ಳಿ ಮತ್ತು ನೈರುತ್ಯ ರೈಲ್ವೆ ಉಪಸ್ಥಾವರ, ನಿಟ್ಟೂರು ಸ್ವೀಕರಣಾ ಕೇಂದ್ರದ ವ್ಯಾಪ್ತಿಯ ಎಲ್ಲ ಗ್ರಾಮ, ಕೈಗಾರಿಕಾ ಪ್ರದೇಶ.

ಪ್ರದೇಶಗಳು (28ರಂದು): ಅಂತರಸನಹಳ್ಳಿ ಸ್ವೀಕರಣಾ ಕೇಂದ್ರದ ಬೆಳ್ಳಾವಿ, ಹೆಗ್ಗೆರೆ, ಮಲ್ಲಸಂದ್ರ, ದೊಡ್ಡ ಸಾರಂಗಿ, ಕೋರ, ಬೆಳಧರ, ಊರ್ಡಿಗೆರೆ, ಸಿ.ಟಿ.ಕೆರೆ, ಟಿಎಂಟಿಪಿ ಹಾಗೂ ವಿಪ್ರೊ ಮಾರ್ಗ.

ADVERTISEMENT

ವಸಂತನರಸಾಪುರ ಸ್ವೀಕರಣಾ ಕೇಂದ್ರದ ತೋವಿನಕೆರೆ, ಚೇಳೂರು, ಹೊಸಕೆರೆ, ಹಾಗಲವಾಡಿ, ಮೆಳೆಕೋಟೆ, ನಂದಿಹಳ್ಳಿ, ಹೆಬ್ಬೂರು, ತಿಮ್ಮಸಂದ್ರ, ಹೊನ್ನೇನಹಳ್ಳಿ, ಬಡ್ಡಿಹಳ್ಳಿ ಉಪಸ್ಥಾವರಗಳಿಗೆ ಒಳಪಡುವ ಗ್ರಾಮ, ಕೈಗಾರಿಕಾ ಪ್ರದೇಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.