ADVERTISEMENT

ಬಿಜೆಪಿಗೆ ಅಧ್ಯಕ್ಷಗಾದಿ ನಿರೀಕ್ಷೆ

ತುರುವೇಕೆರೆ ಪಟ್ಟಣ ಪಂಚಾಯಿತಿ: ಯಾವ ಪಕ್ಷಕ್ಕೂ ಇಲ್ಲ ಸ್ಪಷ್ಟ ಬಹುಮತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 7:56 IST
Last Updated 12 ಅಕ್ಟೋಬರ್ 2020, 7:56 IST
ತುರುವೇಕೆರೆ ಪಟ್ಟಣ ಪಂಚಾಯಿತಿ
ತುರುವೇಕೆರೆ ಪಟ್ಟಣ ಪಂಚಾಯಿತಿ   

ತುರುವೇಕೆರೆ: ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪಟ್ಟಿ ಹೊರ ಬಿದ್ದ ಬೆನ್ನಲ್ಲೇ ಕುರ್ಚಿಗಾಗಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.

14 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ. ಬಿಜೆಪಿಯ 6, ಜೆಡಿಎಸ್‌ನ 5 ಕಾಂಗ್ರೆಸ್‌ನ 2 ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ.

ಈ ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಪಟ್ಟಣ ಪಂಚಾಯಿತಿಯಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಗದ್ದುಗೆ ಏರಲು ಬಿಜೆಪಿ ಉತ್ಸುಕವಾಗಿದೆ.

ADVERTISEMENT

ಬಿಜೆಪಿಗೆ ಅಧಿಕಾರ ಒಲಿಯುವುದು ಬಹುತೇಕ ಖಚಿವಾಗಿದ್ದು, ಬಿಜೆಪಿ ಸದಸ್ಯರ ನಡುವೆಯೇ ತೀವ್ರ ಪೈಪೋಟಿ ನಡೆದಿದೆ.

ಚುಕ್ಕಾಣಿ ಹಿಡಿಯಲು 8 ಸದಸ್ಯರ ಬೆಂಬಲ ಅಗತ್ಯ. 12ನೇ ವಾರ್ಡ್‌ನ ಪಕ್ಷೇತರ ಸದಸ್ಯ ಟಿ.ಕೆ. ಪ್ರಭಾಕರ್‌ 6 ಸ್ಥಾನ ಪಡೆದಿರುವ ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಜೊತೆಗೆ ಶಾಸಕರ ಒಂದು ಮತದಿಂದ ನಿರಾಯಾಸವಾಗಿ ಅಧ್ಯಕ್ಷಗಾದಿ ಪಡೆಯಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ.

ಅಧ್ಯಕ್ಷ ಸ್ಥಾನಕ್ಕೆ ಅಂಜನ್ ಕುಮಾರ್, ಕೆ.ರವಿ, ಚಿದಾನಂದ್, ಟಿ.ಕೆ.ಪ್ರಭಾಕರ್‌ ನಡುವೆ ತೀವ್ರ ಪೈಪೋಟಿ ಇದೆ. ಶಾಸಕ ಮಸಾಲ ಜಯರಾಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅಂಜನ್ ಕುಮಾರ್ ಹೆಸರು ಮುಂಚೂಣಿಯಲ್ಲಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯೆರಾದ ಭಾಗ್ಯ ಹಾಗೂ ಶೀಲಾ ನಡುವೆ ತೀವ್ರ ಪೈಪೋಟಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.