ಕುಣಿಗಲ್: ಪಶು ಸಂಗೋಪನಾ ಇಲಾಖೆ 1962 ಸಹಾಯವಾಣಿ ತುರ್ತು ಚಿಕಿತ್ಸಾ ವಾಹನದ ಚಾಲಕನನ್ನು ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ತಾಲ್ಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಂಗಳವಾರ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ದಲಿತ ಜನಜಾಗೃತಿ ಸಮಿತಿ ಅಧ್ಯಕ್ಷ ಎಸ್.ಟಿ.ರಾಜು, ರಾಜ್ಯದಲ್ಲಿ ಪಶು ಆರೋಗ್ಯದ ದೃಷ್ಟಿಯಿಂದ ಸರ್ಕಾರ 1962 ಸಹಾಯವಾಣಿ ತುರ್ತುಚಿಕಿತ್ಸಾ ವಾಹನ ವ್ಯವಸ್ಥೆ ಮಾಡಿದೆ. ನಿರ್ವಹಣೆಯನ್ನು ಮಹಾರಾಷ್ಟ್ರದ ಏಜೆನ್ಸಿ ಪಡೆದುಕೊಂಡಿದೆ. ತಾಲ್ಲೂಕಿನ ಶ್ರೀನಿವಾಸ್ ಅವರನ್ನು ಚಾಲಕನಾಗಿ ನೇಮಿಸಿಕೊಳ್ಳಲಾಗಿತ್ತು. ಪಶು ವೈದ್ಯರು ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಶ್ರೀನಿವಾಸ್ ಆರೋಪಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರಿಂದ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ದೂರಿದರು .
ದಲಿತ ಜಾಗೃತಿ ಸಮಿತಿ ಸಂಚಾಲಕ ದಲಿತ್ ನಾರಾಯಣ, ಮೋಹನ್ ಕುಮಾರ್, ಚಿಕ್ಕಣ್ಣ, ಶ್ರೀನಿವಾಸಯ್ಯ, ಪ್ರದೀಪ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.