ADVERTISEMENT

ಸೇವಾ ಭದ್ರತೆ ಒದಗಿಸಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 2:57 IST
Last Updated 30 ಸೆಪ್ಟೆಂಬರ್ 2020, 2:57 IST
ತಿಪಟೂರಿನ ಸಿಂಗ್ರಿ ನಂಜಪ್ಪ ವೃತ್ತದ ಬಳಿಯ ನಗರಸಭೆಯ ಮುಂಭಾಗದಲ್ಲಿ ಹೊರಗುತ್ತಿಗೆ ವಾಹನ ಚಾಲಕರು ಮೌನ ಪ್ರತಿಭಟನೆ ನಡೆಸಿದರು
ತಿಪಟೂರಿನ ಸಿಂಗ್ರಿ ನಂಜಪ್ಪ ವೃತ್ತದ ಬಳಿಯ ನಗರಸಭೆಯ ಮುಂಭಾಗದಲ್ಲಿ ಹೊರಗುತ್ತಿಗೆ ವಾಹನ ಚಾಲಕರು ಮೌನ ಪ್ರತಿಭಟನೆ ನಡೆಸಿದರು   

ತಿಪಟೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಪೌರಕಾರ್ಮಿಕರ ಮಾದರಿಯಲ್ಲಿ ನೇರ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಹೊರಗುತ್ತಿಗೆ ವಾಹನ ಚಾಲಕರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ, ‘ಎಲ್ಲ ನಗರಗಳ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅನೇಕ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ಎರಡು ವಿಭಾಗಗಳಿಂದ 10 ಸಾವಿರಕ್ಕೂ ಅಧಿಕ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಸೇವಾ ಭದ್ರತೆ ಇಲ್ಲ. ಜಿಎಸ್‌ಟಿ ಹೆಸರಿನಲ್ಲಿ ₹ 100 ಕೋಟಿ ಉಳಿತಾಯವಾಗುತ್ತದೆ. ಗುತ್ತಿಗೆ ಏಜನ್ಸಿಗಳಿಗೆ ನೀಡುವ ಸೇವಾ ಶುಲ್ಕವು ಉಳಿಯಲಿದೆ. ಅದ್ದರಿಂದ ರಾಜ್ಯಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಶಾಸಕ ಬಿ.ಸಿ.ನಾಗೇಶ್, ತಹಶೀಲ್ದಾರ್ ಚಂದ್ರಶೇಖರ್, ಪೌರಾಯುಕ್ತ ಉಮಾಕಾಂತ್‍ರವರಿಗೆ ಮನವಿ ಪತ್ರ ನೀಡಿದರು. ಉಪಾಧ್ಯಕ್ಷ ರಾಮಚಂದ್ರ,ಟಿ.ಪಿ. ಮಂಜುನಾಥ್, ಶಿವಸ್ವಾಮಿ, ನರಸಿಂಹಮೂರ್ತಿ, ಕಾಂತರಾಜು, ದೀಪಕ್, ಎಲ್.ಟಿ. ಮಂಜುನಾಥ್, ಮಂಜುನಾಥ್ ಸಿದ್ದಾಪುರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.