ADVERTISEMENT

ಫುಟ್‌ಪಾತ್‌ನಲ್ಲಿ ಪಾತ್ರೆ ತೊಳೆಯುವ ಧನುಷಾ ಪಿಯುಸಿ ಸಾಧನೆ

ಪಿಯುಸಿ ಪರೀಕ್ಷೆಯಲ್ಲಿ ಶೇ 93 ಅಂಕ ಗಳಿಸಿ ಜ್ಞಾನ ಭಾರತಿ ಕಾಲೇಜಿನ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 13:01 IST
Last Updated 21 ಜುಲೈ 2020, 13:01 IST
ಕುಣಿಗಲ್ ಖಾಸಗಿ ಬಸ್ ನಿಲ್ದಾಣದ ಬಳಿ ಫುಟ್‌ಪಾತ್ ಹೋಟೆಲ್‌ನಲ್ಲಿ ಪೋಷಕರಿಗೆ ಸಹಕರಿಸುತ್ತಿರುವ ಧನುಷಾ 
ಕುಣಿಗಲ್ ಖಾಸಗಿ ಬಸ್ ನಿಲ್ದಾಣದ ಬಳಿ ಫುಟ್‌ಪಾತ್ ಹೋಟೆಲ್‌ನಲ್ಲಿ ಪೋಷಕರಿಗೆ ಸಹಕರಿಸುತ್ತಿರುವ ಧನುಷಾ    

ಕುಣಿಗಲ್: ಖಾಸಗಿ ಬಸ್ ನಿಲ್ದಾಣದ ಬಳಿ ಫುಟ್‌ಪಾತ್‌ನಲ್ಲಿ ಪೋಷಕರು ನಡೆಸುತ್ತಿರುವ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಲೇ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 93.67 ಅಂಕ ಗಳಿಸಿದ್ದಾರೆಧನುಷಾ.

ಪಟ್ಟಣದ ಪತಂಜಲಿ ನಗರದ ರಂಗಸ್ವಾಮಿ, ಗಂಗಮ್ಮ ದಂಪತಿ ಜೀವನ ನಿರ್ವಹಣೆಗಾಗಿ ಫುಟ್‌ಪಾತ್ ಹೋಟೆಲ್ ನಡೆಸುತ್ತಿದ್ದಾರೆ. ಇಲ್ಲಿ ಧನುಷಾ ತಂದೆ– ತಾಯಿಗೆ ಸಹಕರಿಸುತ್ತಾ ಓದಿನಲ್ಲಿ ತೊಡಗಿದ್ದರು. ಪಾತ್ರೆ ತೊಳೆಯುವ ಕೆಲಸದಿಂದ ಹಿಡಿದು ಪಾರ್ಸಲ್ ಕಟ್ಟುವವರೆಗೂ ಸಹಕರಿಸುತ್ತಿದ್ದ ಧನುಷಾಗೆ ಬಿಡುವಿಲ್ಲದ ಕೆಲಸ. ಜತೆಗೆ ಓದುವ ಹಂಬಲವೂ.

ಈ ಹಂಬಲಕ್ಕೆ ಪೋಷಕರು, ಜ್ಞಾನಭಾರತಿ ಕಾಲೇಜಿನ ಉಪನ್ಯಾಸಕರು ಪ್ರೋತ್ಸಾಹ ನೀಡಿದರು. ಪಿಯುಸಿಯಲ್ಲಿ ಶೇ 93.67 ಅಂಕ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. (ಭೌತ ವಿಜ್ಞಾನ 100, ಗಣಿತ 100, ರಸಾಯನ ವಿಜ್ಞಾನ 97 ಮತ್ತು ಜೀವ ವಿಜ್ಞಾನದಲ್ಲಿ 95 ಅಂಕ)

ADVERTISEMENT

ಸಿಇಟಿಯಲ್ಲೂ ಹೆಚ್ಚಿನ ಅಂಕ ಪಡೆದು ಎಂಜಿನಿಯರ್ ಆಗುವ ಬಯಕೆ ಧನುಷಾರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.