ADVERTISEMENT

ರಾಯರ ಆರಾಧನಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 14:53 IST
Last Updated 6 ಆಗಸ್ಟ್ 2020, 14:53 IST
ಆರಾಧನಾ ಮಹೋತ್ಸವದ ಅಂಗವಾಗಿ ಶೆಟ್ಟಿಹಳ್ಳಿ ಗೇಟ್‌ ಬಳಿಯ ರಾಘವೇಂದ್ರ ಸ್ವಾಮಿ ಮಠದಕ್ಕೆ ಭೇಟಿ ನೀಡಿದ ಭಕ್ತರು ಅಂತರ ಕಾಯ್ದುಕೊಂಡು ರಾಯರಿಗೆ ನಮಿಸಿದರು
ಆರಾಧನಾ ಮಹೋತ್ಸವದ ಅಂಗವಾಗಿ ಶೆಟ್ಟಿಹಳ್ಳಿ ಗೇಟ್‌ ಬಳಿಯ ರಾಘವೇಂದ್ರ ಸ್ವಾಮಿ ಮಠದಕ್ಕೆ ಭೇಟಿ ನೀಡಿದ ಭಕ್ತರು ಅಂತರ ಕಾಯ್ದುಕೊಂಡು ರಾಯರಿಗೆ ನಮಿಸಿದರು   

ತುಮಕೂರು: ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 3 ದಿನಗಳಿಂದ ಮಂತ್ರಾಲಯದ ಸಂಪ್ರದಾಯದಂತೆ ನಡೆಯುತ್ತಿದ್ದ ರಾಘವೇಂದ್ರ ಸ್ವಾಮಿಗಳ ವೈಭವದ 349ನೇ ಆರಾಧನಾ ಮಹೋತ್ಸವ ಗುರುವಾರ ವಿಧ್ಯುಕ್ತವಾಗಿ ಮುಕ್ತಾಯವಾಯಿತು.

ಸಂಪ್ರದಾಯದಂತೆ ಮೊದಲ ದಿನ ಮೂಲ ಬೃಂದಾವನಕ್ಕೆ ಗಂಧದ ಲೇಪನ ಮಾಡಿ ಎರಡನೆಯ ದಿನ ಅಯೋಧ್ಯೆಯ ಶ್ರೀರಾಮನ ದೇವಾಲಯದ ಮೂಲನಕ್ಷೆಯನ್ನು ಇಟ್ಟು ಪಂಚಾಮೃತ ಅಭಿಷೇಕ ಮಾಡಲಾಯಿತು.ಮೂಲ ರಾಮನನ್ನು ಪೂಜಿಸಿ ಬೃಂದಾವನಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ಸರಳವಾಗಿ ತೊಟ್ಟಿಲು ಸೇವೆ ನೆರವೇರಿಸಲಾಯಿತು.

ಗುರುವಾರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಬೆಣ್ಣೆ ಅಲಂಕಾರ ಮಾಡಲಾಯಿತು. ಮಧ್ಯಾಹ್ನ 12 ಗಂಟೆಗೆ ರಥೋತ್ಸವ ಜರುಗಿತು. ಭಕ್ತರು ಸರದಿ ಸಾಲಿನಲ್ಲಿ ಅಂತರ ಕಾಯ್ದುಕೊಂಡು ರಾಯರ ದರ್ಶನ ಪಡೆದರು. ಬದರೀನಾಥ್ ಜೋಷಿ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ಕಾರ್ಯದರ್ಶಿ ಪುಟ್ಟಣ್ಣ, ನಿರ್ದೇಶಕರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.