ADVERTISEMENT

ಲಿಂಗೈಕ್ಯರಾದ ತೊರೆಮಠದ ರಾಜಶೇಖರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 16:21 IST
Last Updated 11 ಡಿಸೆಂಬರ್ 2023, 16:21 IST
ಫೋಟೋ 02,ಸುದ್ದಿ 02,ಗುಬ್ಬಿ: ಲಿಂಗೈಕ್ಯರಾದ ತೊರೆಮಠದ ರಾಜಶೇಖರ ಸ್ವಾಮಿಗಳು 75 ವರ್ಷ.
ಫೋಟೋ 02,ಸುದ್ದಿ 02,ಗುಬ್ಬಿ: ಲಿಂಗೈಕ್ಯರಾದ ತೊರೆಮಠದ ರಾಜಶೇಖರ ಸ್ವಾಮಿಗಳು 75 ವರ್ಷ.   

ಗುಬ್ಬಿ: ಪಟ್ಟಣದ ತೊರೆಮಠದ ರಾಜಶೇಖರ ಸ್ವಾಮೀಜಿ (75) ಅನಾರೋಗ್ಯದಿಂದ ಸೋಮವಾರ ಲಿಂಗೈಕ್ಯರಾದರು.

ಪೂರ್ವಾಶ್ರಮದಲ್ಲಿ ಧಾರವಾಡ ವಿಶ್ವವಿದ್ಯಾಲಯದ ಪ್ರಯೋಗಶಾಲೆಯಲ್ಲಿ ಸಹಾಯಕರಾಗಿದ್ದ ಅವರು ಹಿಂದಿನ ಪೀಠಾಧಿಕಾರಿಗಳಾಗಿದ್ದ ನೀಲಕಂಠಸ್ವಾಮೀಜಿಗಳ ಉತ್ತರಾಧಿಕಾರಿಯಾಗಿ 1986ರಲ್ಲಿ ಮಠದ ಜವಾಬ್ದಾರಿ ವಹಿಸಿಕೊಂಡಿದ್ದರು.

ಸುಮಾರು 400 ವರ್ಷಗಳ ಹಿಂದೆ ಆಟವಿಸ್ವಾಮಿಗಳಿಂದ ಸ್ಥಾಪನೆಗೊಂಡಿದ್ದ ಮಠವು ಐತಿಹಾಸಿಕ ಪರಂಪರೆ ಹೊಂದಿದೆ.

ADVERTISEMENT

ಮಂಗಳವಾರ ಸಾರ್ವಜನಿಕರ ದರ್ಶನದ ನಂತರ ಬೆಳಿಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ವಿಧಿ ವಿಧಾನಗಳನ್ನು ನೆರವೇರಿಸಿ ಅಂತಿಮ ಕ್ರಿಯಾಸಮಾಧಿ ಮಾಡಲಾಗುವುದು ಎಂದು 18 ಕೋಮಿನ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.