ADVERTISEMENT

ತಳಿಗೆ ಎಡೆಗೆ ನಿಷೇಧ: ಮುಂದುವರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 14:23 IST
Last Updated 18 ಜುಲೈ 2023, 14:23 IST
ಕುಣಿಗಲ್ ತಾಲ್ಲೂಕಿನ ರಂಗಸ್ವಾಮಿಬೆಟ್ಟದಲ್ಲಿ ತಳಿಗೆ ಎಡೆ ಪ್ರಸಾದಕ್ಕೆ ಅವಕಾಶ ನೀಡುವಂತೆ ಮೂಲ ವಂಶಸ್ಥರು ಒತ್ತಾಯಿಸಿದ್ದಾರೆ
ಕುಣಿಗಲ್ ತಾಲ್ಲೂಕಿನ ರಂಗಸ್ವಾಮಿಬೆಟ್ಟದಲ್ಲಿ ತಳಿಗೆ ಎಡೆ ಪ್ರಸಾದಕ್ಕೆ ಅವಕಾಶ ನೀಡುವಂತೆ ಮೂಲ ವಂಶಸ್ಥರು ಒತ್ತಾಯಿಸಿದ್ದಾರೆ   

ಕುಣಿಗಲ್: ತಾಲ್ಲೂಕಿನ ರಂಗಸ್ವಾಮಿಬೆಟ್ಟದಲ್ಲಿ ಸಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದ್ದ ತಳಿಗೆ (ಮಾಂಸಾಹಾರ) ಎಡೆ ಪ್ರಸಾದ ಪದ್ಧತಿಗೆ ಆಡಳಿತ ಮಂಡಳಿಯ ವೆಂಕಟರಂಗಯ್ಯ ಮತ್ತು ಉಸ್ತುವಾರಿ ಮಂಜುನಾಥ ನಿಷೇಧ ಹೇರಿದ್ದು, ಮುಂದುವರಿಕೆಗೆ ಒತ್ತಾಯಿಸಿ ಭಕ್ತರು ಗ್ರೇಡ್ 2 ತಹಶೀಲ್ದಾರ್ ಯೋಗೀಶ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ವಿಜಯ ಸಂಜೀವಯ್ಯ ಮಾತನಾಡಿ, ತಾಲ್ಲೂಕಿನ ಮಡಿಕೆಹಳ್ಳಿ ಪಂಚಾಯಿತಿ ಬೆಟ್ಟದ ರಂಗನಾಥ ದೇವಸ್ಥಾನದ ಮೂಲ ವಂಶಸ್ಥರಾಗಿದ್ದು ಪೂರ್ವಜರು ದೇವಸ್ಥಾನ ನಿರ್ಮಿಸಿದ್ದಾರೆ. ತಾತ ಸಮೇರಾಯ ರಂಗಪ್ಪ ತಪಸ್ಸಿನಿಂದ ರಂಗನಾಥ ಸ್ವಾಮಿ ದೇವರು ನೆಲೆಸಿದ್ದಾರೆ. ನಂತರ ಸಮೇರಾಯ ರಂಗಪ್ಪ ನಿಧನದ ನಂತರ ಅವರ ಗದ್ದುಗೆಯನ್ನು ಸ್ವಾಮಿಯ ಪಾದದಲ್ಲಿ ನಿರ್ಮಿಸಲಾಗಿದೆ. ದಾಸ ಮನೆತನದವರಾದ ಕಾರಣ ಪೂರ್ವಜರ ಕಾಲದಿಂದಲೂ ಪೂಜಾ ವಿಧಾನದಲ್ಲಿ ತಳಿಗೆ (ಮಾಂಸಹಾರ)ಎಡೆ ಪ್ರಸಾದ ಇಡುವ ಸಂಪ್ರದಾಯ ನಡೆದುಕೊಂಡು ಬಂದಿದೆ ಎಂದರು.

ಈ ಪೂಜಾ ವಿಧಾನಗಳನ್ನು ದಾಸನಪುರ, ಬೊಮ್ಮಡಗೆರೆ ಮತ್ತು ಮುತಕದಹಳ್ಳಿ ಅರ್ಚಕರನ್ನು ನೇಮಿಸಿ ಕರಾರು ಮಾಡಲಾಗಿದೆ. ಈ ನಡುವೆ ದೇವಾಲಯ ಮುಜುರಾಯಿ ಇಲಾಖೆಗಳಿಗೆ ಸೇರಿಸಿದ್ದರೂ ಪೂಜಾ ವಿಧಾನ, ಸಂಪ್ರದಾಯ ಯಥಾಸ್ಥಿತಿಯಲ್ಲಿ ನಡೆದುಕೊಂಡು ಬರುತ್ತಿದ್ದವು. ಕಳೆದ ವಾರದಿಂದ ಆಡಳಿತ ಮಂಡಳಿಯ ವೆಂಕಟರಂಗಯ್ಯ ಮತ್ತು ಉಸ್ತುವಾರಿ ಮಂಜುನಾಥ್ ಕಾಲಾಂತರದಿಂದ ನಡೆದುಕೊಂಡು ಬಂದ ಪದ್ಧತಿಗೆ ನಿಷೇಧ ಹೇರಿದ್ದಾರೆ. ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ. ಸಂಪ್ರದಾಯಿಕ ಪದ್ಧತಿ ಮುಂದುವರೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಪ್ರಮುಖರಾದ ಚಿನ್ನಸ್ವಾಮಿ, ವೆಂಕಟೇಶ್, ಪುಟ್ಟರಾಜು, ರಂಗಸ್ವಾಮಿ, ನರಸಿಂಹಯ್ಯ, ರವಿಕುಮಾರ್, ಕನಕರಾಜು, ವೇಣುಗೋಪಾಲ್, ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.